ಬೆಳ್ತಂಗಡಿ; ತಾಲೂಕಿನ ಅಲ್ಲಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಇಬ್ಬರು ಮಹಿಳೆಯರು, ಲಾಕ್ ಡೌನ್ ಕಾರಣ ಕೆಲಸ ಹಾಗೂ ಹಣ ಇಲ್ಲದೆ, ಕಳೆದ ಎರಡು ದಿನಗಳಿಂದ ಉಜಿರೆಯ ಬಸ್ ಸ್ಟ್ಯಾಂಡ್ ನಲ್ಲಿ ಉಳಿದಿದ್ದ ಬಗ್ಗೆ ವಿವರ ಪಡೆದ ಉಜಿರೆ ಗ್ರಾಮ ಪಂಚಾಯತ್ ಅವರಿಗೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ.
ಶುಕ್ರವಾರ ಈ ವಿಚಾರ ಅರಿತ ಉಜಿರೆ ಪಂಚಾಯಿತಿ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಮತ್ತು ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಮಹಿಳೆಯರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಮಾಡಿ, ಬಸ್ ವೆಚ್ಚವನ್ನು ಭರಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಇದೇ ರೀತಿ ಬೀದಿಬದಿ ವ್ಯಾಪಾರಕ್ಕಾಗಿ ಬಂದಿದ್ದ,ಪುಟಾಣಿ ಮಗುವೂ ಇದ್ದ ಮಹಿಳೆಯೊಬ್ಬರನ್ನೂ ಗ್ರಾ.ಪಂ ಆಡಳಿತ ಸಾರ್ವಜನಿಕರ ಸಹಕಾರದೊಂದಿಗೆ ತಿಂಗಳ ಹಿಂದೆ ಊರಿಗೆ ಮರಳಿಸುವ ಕಾರ್ಯ ಮಾಡಿತ್ತು.