Posts

ಅರಣ್ಯ ಅವಲಂಬಿತವಾಗದೆ ಬದುಕುವ ಬಗ್ಗೆ ನಾವು ಪ್ರಾಕೃತಿಕ ಕಾಳಜಿ ವಹಿಸಬೇಕಿದೆ; ಡಾ. ವೀರೇಂದ್ರ ಹೆಗ್ಗಡೆ ||ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ ಹಾಗೂ ನೇತ್ರಾವತಿ ಮತ್ತು ಇತರೇ ಉಪನದಿಗಳ ಪವಿತ್ರತೆ- ಪ್ರಾಮುಖ್ಯತೆ ಕುರಿತಾದ ವಿಚಾರ ಸಂಕಿರಣ

1 min read

ಬೆಳ್ತಂಗಡಿ; ಪರಿಸರ ಸಂರಕ್ಷಣೆಗೆ ಧರ್ಮಸ್ಥಳ ಕ್ಷೇತ್ರ ಪೃಜ್ಞಾಪೂರ್ವಕ ಕರ್ತವ್ಯದ ದೃಷ್ಟಿಯಿಂದ  ಅಪಾರವಾದ ಕಾಲಜಿಯೊಂದಿಗೆ ಕೆಲಸ ಮಾಡುತ್ತಿದೆ. 40 ವರ್ಷಗಳಿಂದ ಕ್ಷೇತ್ರದಲ್ಲಿ ಕಟ್ಟಿಗೆಯ ಬದಲು ಸ್ಡೀಮ್ ಬಳಸಲಾಗುತ್ತಿದೆ. ಕಟ್ಟಡಗಳಲ್ಲಿ ಮರ, ಫೈಬರ್ ಮತ್ತು ಅಲ್ಯೂಮಿನಿಯಂ ಬಳಸಲಾಗುತ್ತಿದೆ. ಇದೇ ರೀತಿಯ ಕಾಳಜಿ ಎಲ್ಲರೂ ತೆಗೆದುಕೊಳ್ಳಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಕರ್ನಾಟಕ ಸರಕಾರ,  ಕರ್ನಾಟಕ ಅರಣ್ಯ ಇಲಾಖೆ ಹಾಗೂ ಎಸ್‌ಡಿಎಂ ಸ್ವಾಯತ್ತ ಕಾಲೇಜು ಸಹಭಾಗಿತ್ವದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ ಹಾಗೂ ನೇತ್ರಾವತಿ ಮತ್ತು ಇತರೇ ಉಪನದಿಗಳ ಪವಿತ್ರತೆ- ಪ್ರಾಮುಖ್ಯತೆ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾವು ಇರುವುದು ಭಗವಂತ ಮತ್ತು ಪ್ರಾಣಿ ಪಕ್ಷಿಗಳು ನಮಗೆ ನೀಡಿದ ಭೂಮಿಯಲ್ಲಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.‌ಅರಣ್ಯ ಇಲಾಖೆಯವರು ನಮ್ಮ ಪ್ರತಿನಿಧಿಗಳು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ವಿಪತ್ತು ನಿರ್ವಹಣಾ ತಂಡದ‌ ಮೂಲಕ ಸಾವಿರಾರು ಗಿಡಗಳನ್ನು ನೆಡುವ ಕಾರ್ಯ ಮಾಡಿದ್ದೇವೆ. ಕಾಡು ಪ್ರಾಣಿಗಳ ಹಾವಳಿ ತಡೆಗೆ ಪೂರಕವಾಗಿ ಕಾಡಿನೊಳಗಡೆ ಹಣ್ಣು ಹಂಪಲು ಗಿಡಗಳನ್ನು ನೆಡುವ ಕಾರ್ಯ ಈ ವರ್ಷವೂ ಮುಂದುವರಿಯಲಿದೆ ಎಂದರು. 

ಪ್ರಸ್ತಾವನೆಗೈದು ಸ್ವಾಗತಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು, 13 ಜಿಲ್ಲೆಗಳ ವ್ಯಾಪ್ತಿಯಲ್ಲಿ  ಪಶ್ಚಿಮ ಘಟ್ಟಗಳು ವ್ಯಾಪಿಸಿಕೊಂಡಿದೆ. 1600 ಕಿ.ಮೀ ಉದ್ದದ ನದಿಗಳು ಹರಿಯುತ್ತಿದೆ. 100 ಕಿ.ಮೀ ವಿಸ್ತಾರವಾದ ಪರ್ವತ ಶ್ರೇಣಿಗಳು, 5 ಸಾವಿರ ಗಿಡಗಳ ಪ್ರಬೇಧ, 508 ಪ್ರಬೇದಗಳ ಪಕ್ಷಿ ಕುಲಗಳು, 325 ತಳಿಗಳ ಜೀವಿಗಳು ನೆಲೆಸಿವೆ. ಇವುಗಳಲ್ಲಿ ಅರಣ್ಯ, ಪರಿಸರ, ನದಿಮೂಲಕ್ಕೆ ಹಾನಿಯಾದರೆ ಜೀವಸಂಕುಲಕ್ಕೆ ಅಪಾಯವಿದೆ. ಆದುದರಿಂದ ಸಾಮಾಜಿಕ ಹೋರಾಟದ ನೆಲೆಯಲ್ಲಿ ಇವುಗಳನ್ನು ಉಳಿಸಿ ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ, ಹಿರಿಯರು ತೋರಿಸಿಕೊಟ್ಟ ಪ್ರತಿಯೊಂದು ಆಚರಣೆಗಳ ಹಿಂದೆ ಅರಣ್ಯ ಸಂರಕ್ಷಣಾ ವೈಜ್ಞಾನಿಕ ಹಿನ್ನೆಲೆ ಇತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಡಾ.‌ಹೇಮಾವತಿ ವಿ ಹೆಗ್ಗಡೆಯವರು, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ ಸುರೇಂದ್ರ ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಉದಯಚಂದ್ರ ಉಪಸ್ಥಿತರಿದ್ದರು.

ಗ್ರೀನ್ ಸೋಲ್ಜರ್ಸ್ ಯೋಜನೆಗೆ ರವಿ ಕುಶಾಲಪ್ಪ ಅವರು ಅಧಿಕೃತ ಚಾಲನೆ ನೀಡಿ ಪ್ರಸನ್ನ ಕುಮಾರ್ ಮತ್ತು ಅನುರಾಗ್ ಅವರಿಗೆ ಟೀಶರ್ಟ್ ಹಸ್ತಾಂತರಿಸಿದರು.

ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎನ್ ನಟಾಲ್ಕರ್ ವಂದನಾರ್ಪಣೆಗೈದರು. 

ಪ್ರಾಧ್ಯಾಪಕ ಡಾ. ಕುಮಾರ ಹೆಗ್ಡೆ ಬಿ.ಎ ನಿರೂಪಿಸಿದರು.

----

ವರದಿ; ಅಚ್ಚು ಮುಂಡಾಜೆ

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment