ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಭಿನ್ನ ಕಾರ್ಯಕ್ರಮಗಳಲ್ಲೊಂದಾದ ಬೃಹತ್ ಆರೋಗ್ಯ ಮೇಳ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಫೆ.26 ರಂದು ರಹ್ಮಾನಿಯಾ ಸಮುದಾಯ ಭವನದಲ್ಲಿ ನಡೆಯಿತು.
ಸಮಾರಂಭವನ್ನು ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ, ಹಾಗೂ ಪ್ರಧಾನ ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.
ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅರೇಕಳ ಹಾಜಬ್ಬ ವಿಶೇಷ ಅತಿಥಿಯಾಗಿದ್ದರು. ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಹಾಜಿ ಬಿ. ಹೆಚ್ ಅಬೂಬಕ್ಕರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮುದರ್ರಿಸ್ ಅಬ್ದುಲ್ ಖಾದರ್ ಸಅದಿ, ಕಾಜೂರು ಆಡಳಿತ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೆ ಶೇಕಬ್ಬ ಕುಕ್ಕಾವು, ಇಬ್ರಾಹಿಂ ಮದನಿ, ಮುಹಮ್ಮದ್ ಸಖಾಫಿ, ಪ್ರಸ್ತುತ ಆಡಳಿತ ಸಮಿತಿ ಪದಾಧಿಕಾರಿಗಳು, ಉರೂಸ್ ಸಮಿತಿ ಸದಸ್ಯರುಗಳು, ಯೆನೆಪೋಯ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ರಝಾಕ್, ದಂತ ವೈದ್ಯಕೀಯ ವಿಭಾಗದ ಭರತ್ ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿ ಸಹಾಯಕ ಧರ್ಮಗುರುಗಳಾದ ರಶೀದ್ ಮದನಿ ವಂದಿಸಿದರು. ದಿಡುಪೆ ಯಂಗ್‌ಮೆನ್ಸ್ ಕಮಿಟಿ ಸದಸ್ಯರುಗಳು ಸಂಯೋಜನೆಯಲ್ಲಿ ಪಾತ್ರವಹಿಸಿದರು.
ಆರೋಗ್ಯ ಮೇಳದ ಅಂಗವಾಗಿ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 13 ತಜ್ಞ ವೈದ್ಯರುಗಳ ತಂಡದಿಂದ ಸುಮಾರು ಐನೂರಕ್ಕೂ ಅಧಿಕ ಮಂದಿಯ ಆರೋಗ್ಯ ಪರೀಕ್ಷೆ,ಸಲಹೆ ಮತ್ತು ಮಾಹಿತಿ ನಿಡೀದರು. ಆವಶ್ಯಕತೆ ಇರುವವರಿಗೆ ಉಚಿತವಾಗಿ ತುರ್ತು ಔಷಧಿ ವಿತರಿಸಲಾಯಿತು.
ಹೆಚ್ಚಿನ ಚಿಕಿತ್ಸೆ ಆವಶ್ಯಕತೆ ಯುಳ್ಳವರರನ್ನು ಆಯ್ಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ವ್ಯವಸ್ಥೆ ಕಲ್ಪಿಸಲು ಆಯ್ಕೆಗೊಳಿಸಲಾಯಿತು. ಶಿಬಿರದ ಬಳಿಕ ಎಲ್ಲಾ ವೈದ್ಯರುಗಳನ್ನು ಕಾಜೂರು ಸಮಿತಿ ವತಿಯಿಂದ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು