Posts

ಗುರುವಾಯನಕೆರೆ ಕೇಂದ್ರ ಜುಮಾ ಮಸ್ಜಿದ್ - ಗಲ್ಫ್ ಕಮಿಟಿ ಅಸ್ತಿತ್ವಕ್ಕೆ

1 min read


ಬೆಳ್ತಂಗಡಿ; ಹಝ್ರತ್ ಹಯಾತುಲ್ ಅವುಲಿಯಾ ದರ್ಗಾಶರೀಫ್ ಮತ್ತು ಜುಮಾ ಮಸೀದಿ ಗುರುವಾಯನಕೆರೆ, ಜಮಾಅತ್ ನ ಅಧೀನದಲ್ಲಿ ಬರುವ ಅಲಾದಿ, ಗುರುವಾಯನಕೆರೆ, ಕೋಂಟುಪಲ್ಕೆ, ಮೇಲಂತಬೆಟ್ಟು ಹಾಗೂ ಬಳಂಜ ವ್ಯಾಪ್ತಿಯ ಎಲ್ಲಾ ಅನಿವಾಸಿ ಭಾರತೀಯರ ಸಂಘಟನೆ  'ಗಲ್ಫ್ ಕಮಿಟಿ ಗುರುವಾಯನಕೆರೆ' ಯನ್ನು ಇತ್ತೀಚೆಗೆ ರಚಿಸಲಾಯಿತು.

ಸೌದಿಅರೆಬಿಯಾ,ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತ್ತಾರ್, ಕುವೈತ್ ‌ಸೇರಿದಂತೆ ವಿವಿಧ ಗಲ್ಫ್ ಸದಸ್ಯರ ಒಟ್ಟು 35 ಸದಸ್ಯರ ಸಮಿತಿಯನ್ನು ರಚಿಸಲಾಯಿತು.

ಗಲ್ಫ್ ಸಮಿತಿ ಗುರುವಾಯನಕೆರೆ ಇದರ ನೂತನ ಅಧ್ಯಕ್ಷರಾಗಿ ಸಲೀಮ್ ಜಿ.ಕೆ ಗುರುವಾಯನಕೆರೆ (ಜಿಝಾನ್, ಕೆಎಸ್‌ಎ) , ಉಪಾಧ್ಯಕ್ಷರಾಗಿ ಅನ್ವರ್ ಮೇಲಂತಬೆಟ್ಟು(ದಮ್ಮಾಮ್ ಕೆಎಸ್‌ಎ),  ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎ ಅಬ್ಬಾಸ್ ಬಳಂಜ(ಕುವೈತ್) , ಜೊತೆ ಕಾರ್ಯದರ್ಶಿಯಾಗಿ ಅಬ್ಬಾಸ್ ಹೊಟೆಲ್ ಗುರುವಾಯನಕೆರೆ (ಅಲ್ ರಾಸ್ ಕೆಎಸ್‌ಎ) ಇವರು ಆಯ್ಕೆ ಯಾದರು.

ಜಮಾಅತ್ ಕಮಿಟಿ ಅಧ್ಯಕ್ಷ ಲತೀಫ್ ಹಾಜಿ ಎಸ್‌ಎಮ್‌ಎಸ್, ಪ್ರಧಾನ ಕಾರ್ಯದರ್ಶಿ  ಅಯ್ಯೂಬ್ ಶಾಫಿ ನಡೆಸಿಕೊಟ್ಟರು. ಜಮಾಅತ್ ಖತೀಬರು ಹಾಗೂ ಬೆಳ್ತಂಗಡಿ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ರವರು ನೂತನ ಗಲ್ಫ್ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ ದುವಾ ಆಶೀರ್ವಚನ ನಡೆಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment