ಬೆಳ್ತಂಗಡಿ; ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್‌ನ ವರ್ಷಂಪ್ರತಿ ಆಚರಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಮಾರ್ಚ್ 1 ರಿಂದ ಮಾರ್ಚ್ 5 ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಗೌರವಾಧ್ಯಕ್ಷ ಮುಹಮ್ಮದ್ ತಾಜುದ್ದೀನ್ ಸಖಾಫಿ ಕುಂದಾಪುರ ತಿಳಿಸಿದರು.
ಮಂಗಳವಾರ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಮಾ.1 ರಂದು ಸಂಜೆ ಪರಪ್ಪು ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪಳತ್ತಳಿಕೆ ಧ್ವಜಾರೋಹಣಗೈಯ್ಯಲಿದ್ದಾರೆ. ರಾತ್ರಿ ಉದ್ಘಾಟನೆಯನ್ನು ಖತೀಬ್ ಮುಹಮ್ಮದ್ ತಾಜುದ್ದೀನ್ ಸಖಾಫಿ, ದುವಾಶೀರ್ವಚನವನ್ನು ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್, ಸ್ವಲಾತ್ ನೇತೃತ್ವ ಮತ್ತು ತಾಜುಲ್ ಉಲಮಾ ಅನುಸ್ಮರಣೆಯನ್ನು ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ಕುಪ್ಪೆಟ್ಟಿ ವಹಿಸಲಿದ್ದಾರೆ.ಬಿ.ಐ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾ. 2 ರಂದು ರಾತ್ರಿ ಆನಸ್ ಸಿದ್ದೀಕ್ ಶಿರಿಯಾ, ಮಾ.3 ರಂದು ರಾತ್ರಿ ಜಬ್ಬಾರ್ ಸಖಾಫಿ ಪಾತೂರು, ಮಾ. 4 ರಂದು ಮುಹಮ್ಮದಾಲಿ ಸಖಾಫಿ ಸುರಿಬೈಲು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾ.5 ಉರೂಸ್ ಸಮಾರೋಪ ನಡೆಯಲಿದ್ದು, ಸಂಜೆ ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ರಾತ್ರಿ ಸಯ್ಯಿದ್ ಕಾಜೂರು ತಂಙಳ್ ದುವಾ ನೆರವೇರಿಸಲಿದ್ದಾರೆ. ಮುಹಮ್ಮದ್ ತಾಜುದ್ದೀನ್ ಸಖಾಫಿ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಮನ್ಶರ್ ತಂಙಳ್ ಸಂದೇಶ ನೀಡಲಿದ್ದಾರೆ. ಮುಹಮ್ಮದ್ ಯಾಸಿರ್ ಫಾಝಿಲ್ ಆಲ್ ಫುರ್ಖಾನಿ ಪ್ರಾಸ್ತಾವನೆಗೈದರು. ನೌಫಲ್ ಸಖಾಫಿ ಕಳಸ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ | ಅಬ್ದುಲ್ ಬಶೀರ್ ವಿ.ಕೆ. M.B.B.S. M.S.ORTHO) ಅವರಿಗೆ ಸನ್ಮಾನ ನಡೆಯಲಿದೆ.
ಅಧ್ಯಕ್ಷತೆಯನ್ನು ಬಿ.ಐ. ಮುಹಮ್ಮದ್ ಹನೀಫ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಯೂಸುಫ್ ಅಮ್ಜದಿ ಆಲ್ - ಆಫ್‌ಳಲಿ ಕಾವಳಕಟ್ಟೆ, ವಿಧಾನ ಪರಿಷತ್‌ನ ಶಾಸಕ ಬಿ.ಎಂ. ಫಾರೂಕ್, ಕರ್ನಾಟಕ ಸರಕಾರದ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜಂಟಿ ಕಾರ್ಯದರ್ಶಿಗ ಕೆ.ಎ ಹಿದಾಯತುಲ್ಲ ಹಾಗೂ ಇತರ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ಉರೂಸ್ ಸಮಿತಿಯ ಅಧ್ಯಕ್ಷ ಬಿ.ಐ. ಮುಹಮ್ಮದ್ ಹನೀಫ್ , ಆಡಳಿತ ಸಮಿತಿಯ, ಕೆ.ಎಂ. ಅಬ್ದುಲ್ ಕರೀಮ್ ಗೇರುಕಟ್ಟೆ, ಉರೂಸ್ ಸಮಿತಿಯ ಕೋಶಾಧಿಕಾರಿ ಎಂ.ಕೆ ಯೂಸುಫ್ ಉಪಸ್ಥಿತರಿದ್ದರು.