Posts

ಫೆಬ್ರವರಿ 21- 25; ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ ಉರೂಸ್

ಬೆಳ್ತಂಗಡಿ; ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀ‌ರ್ ಮುಹಿಯುದ್ದೀನ್ ದರ್ಗಾ ಶರೀಫ್‌ ನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ದ.ಕ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಶೈಖುನಾ  ಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್‌ ಅವರ  ಅಧ್ಯಕ್ಷತೆಯಲ್ಲಿ ಫೆ.21 ರಿಂದ 25 ರ ವರೆಗೆ ನಡೆಯಲಿರುವುದು ಎಂದು ಪರಪ್ಪು ಮಸ್ಜಿದ್ ಧರ್ಮಗಳು ತಾಜುದ್ದೀನ್ ಸಖಾಫಿ‌ ಕುಂದಾಪುರ ಹೇಳಿದರು. 


ಆ ಪ್ರಯುಕ್ತ ಫೆ. 21 ರಂದು ಸಂಜೆ ಪರಪ್ಪು ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಧ್ವಜಾರೋಹಣಗೈದು, ರಾತ್ರಿ 8 ಗಂಟೆಗೆ ಪರಪ್ಪು ಮಸೀದಿ ಖತೀಬ್ ತಾಜುದ್ದೀನ್ ಸಖಾಫಿ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಜಮಲುಲ್ಲೈಲಿ ತಂಙಳ್ ವಾದಿ ಇರ್ಫಾನ್ ದುವಾ ನೆರವೇರಿಸಿ ಸುರಿಬೈಲು ಮುಹಮ್ಮದಲಿ ಸಖಾಫಿ ಅವರು ತಾಜುಲ್ ಉಲಮಾ ಅನುಸ್ಮರಣಾ ಪ್ರಭಾಷಣಗೈಯಲಿದ್ದಾರೆ. ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಬಿ.ಕೆ. ರವೂಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ. 22 ರಂದು ತಮಿಳುನಾಡಿನ ಪ್ರಮುಖ ವಿದ್ವಾಂಸ ಮಸ್‌ಊದ್‌ ಸಖಾಫಿ ಗೂಡಲ್ಲೂರು ಮುಖ್ಯಪ್ರಭಾಷಣಗೈಯಲಿದ್ದಾರೆ. ಫೆ. 23 ರಂದಿ ಝೈನುಲ್ ಆಬಿದೀನ್‌ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ ದುವಾ ನೆರವೇರಿಸಿ, ತಾಜುದ್ದೀನ್ ಸಖಾಫಿ ಮುಖ್ಯಪ್ರಭಾಷಣಗೈಯಲಿದ್ದಾರೆ. ಫೆ. 24 ರಂದು ಕೇರಳದ ಪ್ರಮುಖ ವಿದ್ವಾಂಸರಾದ ವಹಾಬ್ ಸಖಾಫಿ ಮಂಬಾಡು ಮುಖ್ಯಪ್ರಭಾಷಣಗೈಯಲಿದ್ದಾರೆ. ಫೆ.25 ರಂದು ಉರೂಸ್ ಸಮಾರೋಪ ಸಮಾರಂಭವು ನಡೆಯಲಿದ್ದು, ಅಸ್ಸಯ್ಯದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಖಾಝಿಯವರ ನೇತೃತ್ವದಲ್ಲಿ ಸಂಜೆ 6 ಗಂಟೆಗೆ ಆಧ್ಯಾತ್ಮಿಕ ಮಜ್ಜಿಸ್ ಹಾಗೂ ಸಾಮೂಹಿಕ ಝಿಯಾರತ್ ಕಾರ್ಯಕ್ರಮ ನಡೆಯಲಿದೆ.

 ರಾತ್ರಿ 8 ಗಂಟೆಗೆ ಸೈಯ್ಯದ್ ಅಹಮದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾ ನೆರವೇರಿಸಿ, ಜಾರಿಗೆಬೈಲು ಮಸೀದಿಯ ಮುದರ್ರಿಸ್ ಮುಹಮ್ಮದ್ ಯಾಸಿರ್   ಫಾಝಿಲ್ ಅಲ್-ಫುರ್ಖಾನಿ ಉದ್ಘಾಟಿಸಲಿದ್ದಾರೆ. 

ಮನ್‌ಶರ್ ತಂಙಳ್ ಆಶಂಸ ಭಾಷಣಗೈಯಲಿದ್ದಾರೆ. ಕೇರಳದ ಪ್ರಮುಖ ವಿದ್ವಾಂಸರಾದ ಶಾಫೀ ಲತೀಫಿ ನುಚ್ಚಾಡು ಮುಖ್ಯಪ್ರಭಾಷಣಗೈಯ್ಯಲಿದ್ದಾರೆ. ಹಾಗೂ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆಂದು ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ 

ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಅಬ್ದುಲ್ ಕರೀಮ್ ಗೇರುಕಟ್ಟೆ, ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಕೆ. ರವೂಫ್, ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಳತ್ತಲಿಕೆ, ಉರೂಸ್ ಸಮಿತಿಯ ಕೋಶಾಧಿಕಾರಿಯಾದ ಎಂ.ಕೆ. ಯೂಸುಫ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official