ಬೆಳ್ತಂಗಡಿ: ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣ ವೇಣೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಬಜಿರೆ ಗ್ರಾಮದ ಹೊಸಪಟ್ಣ ಎಂಬಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಗೋ ಸಾಗಾಟ ಕಂಡುಬಂದಿದ್ದು, ಪೊಲೀಸರು ವಾಹನ, ನಾಲ್ಕು ಜಾನುವಾರು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಕ್ರಮ ಕಸಾಯಿಖಾನೆಗಳು ತಲೆ ಎತ್ತುತ್ತಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ವಿ.ಹಿಂ.ಪ.ವೇಣೂರು ಪ್ರಖಂಡ ಆಗ್ರಹಿಸಿದೆ.