Posts

ಕಾರು ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ಅವರಿಗೆ ಅಂತಿಮ‌ನಮನ: ಕೇರಳದ ಇರಟ್ಟಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಪಾರ್ಥಿವ ಶರೀರ ರವಾನೆ

ಬೆಳ್ತಂಗಡಿ: ಮಾ.29 ಶುಕ್ರವಾರ ಗುರುವಾಯನಕೆರೆ ಶಕ್ತಿ ನಗರದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಪ್ರೈಸ್ ಮ್ಯಾಥ್ಯೂ ಅವರ ಅಂತಿಮ ದರ್ಶನ ಬೆಳ್ತಂಗಡಿ ಕೆಥಡ್ರಲ್ ಮಹಾ ದೇವಾಲಯದಲ್ಲಿ ನಡೆಯಿತು.

ಈ ವೇಳೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರ ನೇತೃತ್ವದಲ್ಲಿ ಧರ್ಮಗುರುಗಳ ಬಳಗ ಅಂತಿಮ ಪ್ರಾರ್ಥನಾ ವಿಧಿ ನಡೆಸಿಕೊಟ್ಟರು.

ಬೆಳ್ತಂಗಡಿ ಸೌದರ್ನ್ ರಬ್ಬರ್ಸ್ ಇದರ ಮಾಲಕ ವಿ.ವಿ.ಮ್ಯಾಥ್ಯೂ ಅವರ ಪುತ್ರರಾಗಿರುವ ಪ್ರೈಸ್ ಮ್ಯಾಥ್ಯೂ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಿಯಂತ್ರಣ ಕಳೆದುಕೊಂಡು ಧರೆಗೆ ಡಿಕ್ಕಿಯಾಗಿ ದಾರುಣವಾಗಿ ಕೊನೆಯುಸಿರೆಳೆದರು. ಅಪಘಾತದ ಸಂದರ್ಭ ಅವರ ಜೊತೆಗಿದ್ದ ಧರ್ಮಸ್ಥಳದ ಅರುಣ್ ಜೆ ಮತ್ತು ನಿತಿನ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರೈಸ್ ಮ್ಯಾಥ್ಯೂ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೊಳಪಡಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಅಸುನೀಗಿದ್ದರು.

ಅವರ ಪಾರ್ಥಿವ ಶರೀರವನ್ನು ಮಹಾದೇವಾಲಯಕ್ಕೆ ತಂದ ವೇಳೆ ಅವರ ಬಂಧುಗಳು ಹಾಗೂ ಮಿತ್ರರು ಅಪಾರ ಪ್ರಮಾಣದಲ್ಲಿ ನೆರೆದಿದ್ದರು. 

ಅವರ ಅಂತಿಮ ವಿಧಿ ಹಾಗೂ ಸಂಸ್ಕಾರ ಕಾರ್ಯ ಕೇರಳದ ಇರಟ್ಟಿಯಲ್ಲಿ ನಡೆಯಲಿರುವುದರಿಂದ ಅವರ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official