Posts

ಹಾಜಬ್ಬ ಅವರ ಬದಲಾಗದ ಸರಳತೆಯೇ ಸಮಾಜಕ್ಕೆ ಪಾಠ; ಸಯ್ಯಿದ್ ಕಾಜೂರು ತಂಙಳ್|| ಕಾಜೂರಿನಲ್ಲಿ ಹರೇಕಳ ಹಾಜಬ್ಬರಿಗೆ ಸನ್ಮಾನ

1 min read

ಬೆಳ್ತಂಗಡಿ; ಹರೇಕಳ ಹಾಜಬ್ಬ ಅವರದ್ದು ಅತ್ಯಂತ ಸರಳತೆಯೆ ಜೀವನವಾದರೂ ಅವರ ಮನಸ್ಸಿನ ಇಚ್ಛೆ ಮತ್ತು ಗುರಿ ಮಹತ್ವದ್ಧಾಗಿತ್ತು. ದೇವರ ನೋಟ ಇರುವುದು ನಿಶ್ಕಲ್ಮಷವಾದ ಮನಸ್ಸಿಗೆ. ಆದ್ದರಿಂದ ಅವರ ಗುರಿ ಈಡೇರಿ ಇಂದು ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ ‌ಎತ್ತರಕ್ಕೆ ಏರಿದರೂ ಅವರ ಬದಲಾಗದ ಸರಳತೆಯೇ ಸಮಾಜಕ್ಕೆ ಉತ್ತಮ ಪಾಠವಾಗಿದೆ ಎಂದು ಕಾಜೂರು ಶಿಕ್ಷಣ ಸಂಸ್ಥೆಗಳ‌ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್ ಹೇಳಿದರು.

ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಶನಿವಾರ ಕಾಜೂರಿನಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಅಭಿನಂದಿಸಿ ಮಾತನಾಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು.

ಹಾಜಬ್ಬ ಅವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಕಾಜೂರು ಕ್ಷೇತ್ರ ಇಂದು ಅಭಿವೃದ್ಧಿಯೊಂದಿಗೆ ಬದಲಾಗುತ್ತಿದೆ. ಈ ಸ್ಥಿತಿಗೆ ಬರುವ ಮುನ್ನ ಇಲ್ಲಿ ಹೇಗಿತ್ತು ಎಂಬುದನ್ನು ಮರೆಯಬಾರದು. ಹಿಂದಿನ ನೆನಪಿನೊಂದಿಗೆ ಮುಂದಿನ ಭವಿಷ್ಯವನ್ನು ಕಟ್ಟೋಣ.‌ ಹರೇಕಳ ಹಾಜಬ್ಬ ಅವರನ್ನೂ ಈ ಬಾರಿ ಸನ್ಮಾನಿಸಿರುವುದು  ಅಭಿನಂದನಾರ್ಹ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ವಿಶೇಷ ಅತಿಥಿಯಾಗಿದ್ದರು.  ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿ‌ದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್,  ಉಪಾಧ್ಯಕ್ಷ ಹಾಜಿ ಬಿ. ಹೆಚ್ ಅಬೂಬಕ್ಕರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್, 

ಕಾಜೂರು ಮಾಜಿ ಅಧ್ಯಕ್ಷರುಗಳಾದ ಕೆ.‌ಶೇಖಬ್ಬ ಕುಕ್ಕಾವು, ಉಮರ್ ಸಖಾಫಿ, ಮುಹಮ್ಮದ್ ಸಖಾಫಿ, ಕಿಲ್ಲೂರು ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆ‌ಮನೆ,  ಯು.ಕೆ ಅಬ್ದುಶ್ಶುಕೂರ್ ಉಜಿರೆ,  ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಉರೂಸ್ ಸಮಿತಿ ಸದಸ್ಯರುಗಳು, ಕಾಜೂರು ಆಡಳಿತ ಸಮಿತಿ ಪದಾಧಿಕಾರಿಗಳು  ಉಪಸ್ಥಿತರಿದ್ದರು.  

ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment