Posts

ಸ್ಪಂದನ ಸೇವಾ ಸಂಘದಿಂದ ಕಿಡ್ನಿ ರೋಗಿಗೆ ಆರ್ಥಿಕ ನೆರವು

0 min read


ಬೆಳ್ತಂಗಡಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು  ಪ್ರತಿ ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಮಡಂತ್ಯಾರು ಕುಕ್ಕಳ ಗ್ರಾಮದ  ರಕ್ತೇಶ್ವರಿಪದವು ನಿವಾಸಿ  ಜಯಾನಂದ ಗೌಡ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ 15 ಸಾವಿರ ರೂ. ಆರ್ಥಿಕ ನೆರವಿನ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ,  ಹಾಗೂ ವಾಣಿ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪದ್ಮ ಗೌಡ.ಹೆಚ್ ಅವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಆಪರೇಟೀವ್ ಸೊಸೈಟಿ (ಲಿ.) ನಿರ್ದೇಶಕರುಗಳಾದ ಉಷಾದೇವಿ ಕಿನ್ಯಾಜೆ,  ಸುರೇಶ್ ಗೌಡ ಕೌಡಂಗೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧನಂಜಯ ಗೌಡ ಪೆರ್ಲ ಶಿಬಾಜೆ, ಸಿಬ್ಬಂದಿಗಳಾದ ಉಮೇಶ್ ಗೌಡ,  ನಿತೇಶ್ ಹುಣ್ಸೆಕಟ್ಟೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ,  ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರುಗಳಾದ ಸೀತಾರಾಮ್ ಬೆಳಾಲು ಮತ್ತು ನಿತಿನ್ ಕನ್ಯಾಡಿ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment