ಬೆಳ್ತಂಗಡಿ: ಲಾಕ್‌ಡೌನ್‌ನಿಂದ ಜನ ದುಡಿಯಲಾಗದ ಪರಿಸ್ಥಿತಿ, ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಬಗ್ಗೆ ಚಿಂತಿಸುವ ಸಂದಿಗ್ಧ ಪರಿಸ್ಥಿತಿಯನ್ನು ಮನಗಂಡ ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಅವರು ತಮ್ಮ ವೈಯುಕ್ತಿಕ ವತಿಯಿಂದ 50 ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಸಹಾಯ್ ಬೆಳ್ತಂಗಡಿ ಸರ್ಕಲ್ ತಂಡದ ಮೂಲಕ ವಿತರಣೆಗಾಗಿ ನೀಡಿದರು.
ಈ ಕಾರ್ಯಕ್ರಮವನ್ನು ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಹಝ್ರತ್ ದುಆದೊಂದಿಗೆ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಯ್ಯಿದ್ ಎಸ್.ಎಂ.ಕೋಯ ತಂಙಳ್, ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಪ್ರ.ಕಾರ್ಯದರ್ಶಿ ಹಾಗೂ ಮಾಜಿ ಸೈನಿಕ ಮುಹಮ್ಮದ್ ರಫಿ ಬೆಳ್ತಂಗಡಿ, ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಸಯ್ಯಿದ್ ಜಾಫರ್ ತಂಙಳ್, ಸಹಾಯ್ ಬೆಳ್ತಂಗಡಿ ಸರ್ಕಲ್ ಡೈರೆಕ್ಟರ್‌ಗಳಾದ ಅಬ್ದುಲ್ ರಶೀದ್ ಬಲಿಪಾಯ ಮತ್ತು ಹಂಝ ಮದನಿ ಗುರುವಾಯನಕೆರೆ, ಉಜಿರೆ ಸೆಂಟರ್ ಅಮೀರ್ ಕಾಸಿಂ ಮುಸ್ಲಿಯಾರ್ ಮಾಚಾರು ಮುಂತಾದವರು ಉಪಸ್ಥಿತರಿದ್ದರು.