ಅಡ್ಯಾರ್ ಕಣ್ಣೂರಿನಲ್ಲಿ ಶನಿವಾರ ನಡೆದ ಬೃಹತ್ ಮಜ್ಲೀಸ್ "ನೂರೇ ಅಜ್ಮೀರ್" ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಉದ್ಯಮಿ, ಕೊಡುಗೈ ದಾನಿ ಉಮರ್ ಹಾಜಿ ಅವರನ್ನು ಗೌರವಾದರದಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವರು, ಕರ್ನಾಟಕ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕರೂ ಆಗಿರುವ ಜನಾಬ್ ಯು.ಟಿ ಖಾದರ್, ಪುತ್ತೂರಿನ ಹಿರಿಯ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಸಹಿತ ಹಲವು ಮುಸ್ಲಿಂ ವಿದ್ವಾಂಸರು, ಗಣ್ಯರು ಈ ಸನ್ಮಾನ ನೆರವೇರಿಸಿದರು
ಜನಾಬ್ ಉಮರ್ ಹಾಜಿ ಅವರು ಹಿರಿಯ ಸಾಮಾಜಿಕ ಕಾರ್ಯಕರ್ತರು. ರಕ್ಷಣಾ ವೇದಿಕೆ ಬೆಂಗಳೂರು ಇದರ ಗೌರವಾಧ್ಯಕ್ಷರು. ಕೊಡುಗೈ ದಾನಿಗಳು. ಸಾಮಾಜಿಕ ತುಡಿತ ಮತ್ತು ಕಳಕಳಿಯುಳ್ಳವರು. ಅವರ ಪುತ್ರನ ಮದುವೆಯ ದಿವಸ ಸಮುದಾಯದ 15 ಜೊತೆ ಮದುವೆ ನೆರವೇರಿಸಿ ತನ್ನ ಮಗಳಂತೆ ಇತರ ಹೆಣ್ಣು ಮಕ್ಕಳೂ ಸಂತೋಷ ಕಾಣಬೇಕೆಂದು ಬಯಸಿದವರು. ತನ್ನ ತಂದೆ ತಾಯಿಯ ಹೆಸರಿನಲ್ಲಿ ಕೋಟಿ ರೂ. ಖರ್ಚು ಮಾಡಿ ಯತೀಂ ಖಾನಾ ನಿರ್ಮಿಸಿ ಯತೀಂ ಗಳ ಸಂರಕ್ಷಕರಾಗಿರುವವರು. ಕಳೆದ 13 ವರ್ಷಗಳಿಂದ ಅವರ ಸ್ವಂತ ಖರ್ಚಿನಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಪವಿತ್ರಾ ಉಮ್ರಾ ಯಾತ್ರೆಗೆ ಕಳಿಸಿಕೊಡುತ್ತಿದ್ದಾರೆ. ಹಲವು ಕಡೆ ಅವರು ಮಸೀದಿ, ಮದರಸ ಕೂಡ ಕಟ್ಟಿಸಿಕೊಟ್ಟಿದ್ದು ಎಲ್ಲಾ ರೀತಿಯಿಂದಲೂ ದಾನಿಯಾಗಿದ್ದಾರೆ. ಅಲ್ಲದೆ ಬೆಂಗಳೂರಿನ ವಕ್ಫ್ ಬೋರ್ಡ್‌ನ ಉಪಾಧ್ಯಕ್ಷ ರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.
-----------
ವರದಿ: ಅಚ್ಚು ಮುಂಡಾಜೆ