Posts

ಜಿಲ್ಲಾ ವಕ್ಫ್ ಸಮಿತಿಯ ತಡೆಯಾಜ್ಞೆ ಹೈಕೋರ್ಟ್ ನಲ್ಲಿ ತೆರವು || ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ನೇತೃತ್ವದ ತಂಡವೇ ಮುಂದುವರಿಕೆ

1 min read



ಬೆಳ್ತಂಗಡಿ: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇಮಕಕ್ಕೆ ರಾಜ್ಯ ವಕ್ಫ್ ಮಂಡಳಿ ಆ.19 ರಂದು ತಡೆಯಾಜ್ಞೆ ನೀಡಿತ್ತಾದರೂ ಸದ್ರಿ ಆದೇಶವನ್ನು ರಾಜ್ಯ ಉಚ್ಚನ್ಯಾಯಾಲಯ ಆ.23 ರಂದು ತೆರವುಗೊಳಿಸಿದೆ. ಆ ಹಿನ್ನೆಲೆಯಲ್ಲಿ  ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ನೇಮಕವಾಗಿದ್ದ ಜಿಲ್ಲಾ ಸಲಹಾ ಸಮಿತಿಯ ತಂಡವೇ ಮತ್ತೆ ಮುಂದುವರಿಯಲಿದೆ. ಈ ಸಮಿತಿಯಲ್ಲಿ ಸದಸ್ಯರಾಗಿರುವ ಕಾಜೂರು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಅವರೂ ತಮ್ಮ ಸದಸ್ಯತ್ವದಲ್ಲಿ ಮತ್ತೆ ಮುಂದುವರಿಯಲಿದ್ದಾರೆ.



ಈ ವರ್ಷದ ಸಲಹಾ ಸಮಿತಿಯನ್ನು ಎಪ್ರಿಲ್ 6 ರಂದು ರಚಿಸಲಾಗಿತ್ತಾದರೂ ಬಳಿಕ ಸಮಿತಿಯನ್ನು ರಾಜ್ಯ ಹಜ್ ಮತ್ತು ವಕ್ಫ್ ಸಚಿವರ ಆಗಸ್ಟ್ 8 ರ ಉಲ್ಲೇಖಿತ ಟಿಪ್ಪಣಿಯಲ್ಲಿ, ಸದ್ರಿ ಸಲಹಾ ಸಮಿತಿಯ ವಿರುದ್ಧ ಸಾರ್ವಜನಿಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ನೀಡಲಾಗಿದೆ ಎಂದು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಆ.19ರಂದು ಹೊರಡಿಸಿದ್ದ ತಡೆ ಆದೇಶದಲ್ಲಿ ತಿಳಿಸಿದ್ದರು.

ಈ ತಡೆಯಾಜ್ಞೆ ವಿರುದ್ಧ ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.  ಅಲ್ಲಿ ಸದ್ರಿ ತಡೆ ಆದೇಶವನ್ನು ಆ.23 ರಂದು ಹೈಕೋರ್ಟ್  ತೆರವುಗೊಳಿಸಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment