Posts

ಕರಾಟೆಯಲ್ಲಿ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಲಂಡನ್‌ನ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

0 min read

ಬೆಳ್ತಂಗಡಿ; ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ -2022 ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ  ಶ್ರೀ ಗುರುದೇವ ಕಾಲೇಜಿನ 3 ಮಂದಿ  ವಿದ್ಯಾರ್ಥಿಗಳು ಉನ್ನತ ಸಾಧನೆ ಮೆರೆದಿದ್ದು ಲಂಡನ್ ನಲ್ಲಿ ನಡೆಯುವ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಯುವರಾಜ್ ಕಟಾ ಹಾಗು ಕುಮಿಟೆ ಯಲ್ಲಿ ಚಿನ್ನದ ಪದಕ, ಶಹೀರ್ ಅನಸ್ ಕಟಾ ವಿಭಾಗದಲ್ಲಿ ಚಿನ್ನ ಹಾಗು ಕುಮಿಟೆ ವಿಭಾಗದಲ್ಲಿ ಬೆಳ್ಳಿ, ಶೇಖ್ ಕಲ್‌ಫಾನ್‌ ಹುಸೇನ್‌ ಕಟಾ ವಿಭಾಗದಲ್ಲಿ ಚಿನ್ನ‌ ಹಾಗೂ ಕುಮಿಟೆ  ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

ವಿಜೇತ ವಿದ್ಯಾರ್ಥಿಗಳನ್ನು ಶ್ರೀ ಗುರುದೇವ ಕಾಲೇಜಿನ  ಕಾಲೇಜಿನ ಸಂಚಾಲಕ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ 

ಹಾಗು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.ಸದ್ರಿ ವಿದ್ಯಾರ್ಥಿಗಳಿಗೆ ರೆನ್ಸಿ ಮುಹಮ್ಮದ್ ನದೀಮ್ ಹಾಗು ಶಿಹಾನ್ ಅಬ್ದುಲ್ ರಹ್ಮಾನ್‌ ಉಜಿರೆ ಅವರು ಕರಾಟೆ ತರಬೇತಿ‌ ನೀಡಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment