Posts

ಚಂದ್ರಶೇಖರ ಆತ್ಮಹತ್ಯೆ ಪ್ರಕರಣ: ನಾಲ್ವರು ಅಪಾದಿತರ ಪೈಕಿ ತೋಟತ್ತಾಡಿ ಗ್ರಾಮದ ಯೋಗೀಶ್ ಬಂಧನ

1 min read

ಬೆಳ್ತಂಗಡಿ: ಸ್ವ ಸಹಾಯ ಸಂಘದ ಸಾಲ ಕಟ್ಟುವ ವಿಚಾರವಾಗಿ ಬೆದರಿಕೆ ಹಾಕಿದ ಕಾರಣಕ್ಕೆ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ತೋಟತ್ತಾಡಿ ಗ್ರಾಮದ ಯೋಗೀಶ್ (34) ಎಂಬಾತನೆಂದು ಗುರುತಿಸಲಾಗಿದೆ.

ತಾಲೂಕಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ (24) ಎಂಬವರಿಗೆ ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರದಲ್ಲಿ ಅದೇ ಸಂಘದ ನಾಲ್ಕು ಜನ ಇತರರು ಬೆದರಿಕೆ ಹಾಕಿದ್ದರೆಂಬುದು ಆರೋಪ.

ಇದೇ ಕಾರಣಕ್ಕೆ ಚಂದ್ರಶೇಖರ ಆ. 25ರಂದು ಆತ್ಮಹತ್ಯೆಗೆ ಯತ್ನಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲುಗೊಂಡಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತೆ ಸೆ. 23ರಂದು ಅವರು ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದರು.

ಘಟನೆಯ ಬಗ್ಗೆ ಮನೆಯವರು ನಾಲ್ವರ ಮೇಲೆ ಆಪಾದನೆ ಹೊರಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಕೂಡ ದಾಖಲಿಸಿದ್ದರು.

ಆ ಸಂಬಂಧ ಪ್ರಕರಣದ ಓರ್ವ ಆರೋಪಿ ತೋಟತ್ತಾಡಿ ಗ್ರಾಮದ ಯೋಗೀಶ್ ನನ್ನು ಧರ್ಮಸ್ಥಳದ  ಎಸ್ .ಐ ಅನಿಲ್ ಕುಮಾರ್ ನೇತೃತ್ವದ ತಂಡ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ನ್ಯಾಯಾಲಯ ಆರೋಪಿಗೆ ಮುಂದಿನ 14 ದಿನಗಳ ನ್ಯಾಯಾಂಗ ವಿಧಿಸಿದೆ. ಇನ್ನೂ ಉಳಿದ ಆರೋಪಿಗಳ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಬಲೆ ಬೀಸಿದ್ದಾರೆ. ಸದ್ರಿ ಪ್ರಕರಣದಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು ಅವರನ್ನು ಬಂಧಸದಿದ್ದರೆ ಠಾಣೆಯ ಎದುರು ಧರಣಿ ನಡೆಸಲಾಗುವುದು ಎಂದು ಚಂದ್ರಶೇಖರ ಅವರ ಹೆತ್ತವರು ಮತ್ತು ಅವರಪರ ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment