Posts

ರಾಷ್ಟ್ರೀಯ ಹಿಂಜಾವೇ ಗೌರವಾಧ್ಯಕ್ಷತೆಗೆ ರವಿಕುಮಾರ್ ಬರಮೇಲು ರಾಜೀನಾಮೆ :- ರವಿ ಕುಮಾರ್ ಸಹೋದರ ಹರೀಶ್ ಕುಮಾರ್ ಅವರನ್ನೇ ಗೌರವಾಧ್ಯಕ್ಷ ಮಾಡಿದ ಸಂಘಟನೆ

1 min read

(ನೂತನವಾಗಿ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹರೀಶ್ ಕುಮಾರ್ ಬರಮೇಲು)

ಬೆಳ್ತಂಗಡಿ: ಬಿಜೆಪಿ ಪಕ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಇರಾದೆಯಿಂದ ನಾನು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿ, ಮಹೇಶ್ ಶೆಟ್ಟಿ ತಿಮರೋಡಿ ಬಣದಲ್ಲಿ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ರವಿ ಕುಮಾರ್ ಬರಮೇಲು ಅವರು ಸಂಘಟನೆಯಿಂದ ಹೊರಬರುತ್ತಿರುವಂತೆ ತುರ್ತು ಸಭೆ ಸೇರಿದ ಸಮಿತಿ, ನೂತನ ಗೌರವಾಧ್ಯಕ್ಷರಾಗಿ ರವಿ ಕುಮಾರ್ ಅವರ ಸಹೋದರ ಹರೀಶ್ ಕುಮಾರ್ ಬರಮೇಲು ಅವರನ್ನು ನೇಮಕಗೊಳಿಸಿ ಅಚ್ಚರಿಯ ನಿರ್ಧಾರಕ್ಕೆ ಬಂದಿದೆ.

ಇತ್ತೀಚೆಗೆ ರವಿಕುಮಾರ್ ಅವರು ಬೆಳ್ತಂಗಡಿ ನಗರದ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಾನು ಬಿಜೆಪಿ ಜೊತೆ ಸೇರಿಕೊಳ್ಳುವ ನಿರ್ಧಾರ ಘೋಷಿಸಿದ್ದರು.

ಅಂದು ಕರೆದಿದ್ದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದ ರವಿಕುಮಾರ್ ಅವರು, ಬಾಲ್ಯದಿಂದಲೇ ನಾನು ಸಂಘಟನೆಯಲ್ಲಿ ಗುರುತಿಸಿಕೊಂಡವ. ಮತ ಚಲಾಯಿಸುವ ಹಕ್ಕು ಸಿಗುವ ಮುನ್ನವೇ ಬಿಜೆಪಿ ಕಾರ್ಯಕರ್ತನಾಗಿದ್ದವನು. ಆದರೆ ಪಕ್ಷದಲ್ಲಿ ಜವಾಬ್ದಾರಿ ಸಿಕ್ಕಿರಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದಿದ್ದೆ. ಆದರೆ ಪಕ್ಷವು ಮತ್ತೆ ಸಂಘಟನೆಯ ಜವಾಬ್ದಾರಿ ನೀಡಿರುವುದರಿಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದರು.

(ರವಿ ಕುಮಾರ್ ಬರಮೇಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು)

ಉಜಿರೆ ಗ್ರಾ.ಪಂ.ನಲ್ಲಿ ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಮತ್ತು ಪಕ್ಷೇತರನಾಗಿ ಒಂದು ಬಾರಿ ಗೆದ್ದು ಸೇವೆ ಸಲ್ಲಿಸಿದ್ದೇನೆ. ಪಕ್ಷೇತರನಾಗಿ ಗೆದ್ದ ಸಂದರ್ಭದಲ್ಲೂ ನಾನು ಯಾವತ್ತೂ ಬಿಜೆಪಿ ನಿಷ್ಟೆಯನ್ನು ಬದಲಿಸದೆ ಇದ್ದೆ. 

ಉಜಿರೆಯಲ್ಲಿ ಬದಲಾದ ಸನ್ನಿವೇಶವೊಂದರ ಸಂದರ್ಭ ಹಿಂದೂ ಜಾಗರಣ ವೇದಿಕೆಯಿಂದ ಹೊರಬರಬೇಕಾಯಿತು. ಅದರ ವಿರುದ್ಧವೇ ಸೆಟೆದು  ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಟ್ಟಿ ಅದರಲ್ಲಿ ಸಕ್ರೀಯ ವಾಗಿ ತೊಡಗಿಸಿಕೊಳ್ಳಬೇಕಾಯಿತು.

ಈಗ ಅದರ ವಿಚಾರ  ನ್ಯಾಯಾಲಯದಲ್ಲಿದೆ. ಹಾಗಿರುವಾಗ ನಾನು ಇದೀಗ ಇಚ್ಛೆ ಬದಲಿಸಿ ರಾ. ಹಿಂ. ಜಾ. ವೇದಿಕೆಯ ಸದಸ್ಯತ್ವ ಸಹಿತ ಎಲ್ಲಾ ಹುದ್ದೆಗಳಿಗೂ ಈಗಾಗಲೇ ರಾಜೀನಾಮೆ ನೀಡಿದ್ದೇನೆ.

ಈ ಕ್ಷಣದಿಂದಲೇ ಬಿಜೆಪಿಯಲ್ಲಿ ಪೂರ್ಣಪಾಲಿಕ ಹಾಗೂ ನಿಷ್ಟಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಿದ್ದೇನೆ‌ ಎಂದಿದ್ದರು.

ರವಿಕುಮಾರ್ ಅವರ ರಾಜೀನಾಮೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ತುರ್ತು ಸೇರಿದ ಕಾರ್ಯಕರ್ತರು, ಅವರ ಸ್ಥಾನಕ್ಕೆ ರವಿ ಅವರ ಸಹೋದರನನ್ನೇ ಹೊಸ ಗೌರವಾಧ್ಯಕ್ಷ ರಾಗಿ ನೇಮಿಸಿದೆ. 

ಚುನಾವಣೆ ಬರುತ್ತಿದ್ದಂತೆ ಆಗಿರುವ ಈ ಬದಲಾವಣೆಗಳು ಚರ್ಚೆಗೆ ಗ್ರಾಸವಾಗಿದೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment