Posts

ಮಂಗಳೂರಿನ ಪ್ರತಿಷ್ಠಿತ ಕೆನರಾ ಇಂಡಸ್ಟ್ರೀಸ್ ನಿರ್ದೇಶಕರಾಗಿ ನೆರಿಯದ P.H ಆನಂದ ಆಯ್ಕೆ

1 min read

ಬೆಳ್ತಂಗಡಿ; ಮಂಗಳೂರಿನ‌ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶ್ರೀ ಮಾತಾ ಮೆಟಲ್ ಇಂಡಸ್ಟ್ರೀಸ್ ಉದ್ಯಮ ಮುನ್ನಡೆಸುತ್ತಿರುವ ನೆರಿಯ ಗ್ರಾಮದ ಪುಲ್ಲಾಜೆ ಪುಣ್ಕೆದಡಿ ನಿವಾಸಿ ಪಿ.ಹೆಚ್ ಆನಂದ ಅವರು ಇದೀಗ ಮಂಗಳೂರಿನ ಪ್ರತಿಷ್ಠಿತ ಕೆನರಾ ಇಂಡಸ್ಟ್ರೀಸ್ ಇದರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ

ಈ‌ ಹಿಂದೆ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಡಿ.4 ರಂದು ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದರು.

ಹೊನ್ನಪ್ಪ ಗೌಡ ಮತ್ತು ಗಿರಿಜಾ ದಂಪತಿ ಪುತ್ರರಾಗಿರುವ ಆನಂದ ಅವರು ಪ್ರಾಥಮಿಕ ಶಿಕ್ಷಣವನ್ನು ನೆರಿಯದಲ್ಲೇ ಪೂರೈಸಿ ಹೆಚ್ಚಿನ‌ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮುಗಿಸಿರುತ್ತಾರೆ. 

ಸಂಘಟನೆ, ಸಹಕಾರ‌ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅವರು ವಿಜಿಎಸ್ ಸೌಹಾರ್ದ ಸಹಕಾರಿ ನಿ.‌ಮಂಗಳೂರು ಇದರ ಸ್ಥಾಪಕ ನಿರ್ದೇಶಕರಾಗಿ ಸೇರಿದಂತೆ ವಿವಿಧ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಅರ್ಹರಿಗೆ ಶೈಕ್ಷಣಿಕ ಪ್ರೋತ್ಸಾಹ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನೆರವು ನೀಡುವ ಮೂಲಕ ಎಲ್ಲರ ಪ್ರೀತಿ ಗಳಿಸಿದ್ದಾರೆ. ಇವರು ಗೃಹಿಣಿಯಾಗಿರುವ ಪತ್ನಿ ಪವಿತ್ರಾ, ಇಬ್ಬರು ಮಕ್ಕಳಾದ ಚಿರಾಗ್(ಪಿಯುಸಿ), ಸ್ನೇಹಾ(9 ನೇ) ಇವರೊಂದಿಗೆ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment