Posts

ಮಶೂದ್ ಕೊಲೆ ಮಾನವೀಯತೆಯ ಕಗ್ಗೊಲೆ:ಶಾಫಿ ಸಅದಿ

ಬೆಂಗಳೂರು: ದ.ಕ ಜಿಲ್ಲೆಯ ಸುಳ್ಯದ ಬೆಳ್ಳಾರೆ ಕಳಂಜ ನಿವಾಸಿ ಮಶೂದ್ ಎಂಬ ಅಮಾಯಕನ ಕೊಲೆ ನಾಗರಿಕ ಸಮಾಜದ ಮಾನವೀಯತೆಗೆ ಸವಾಲಾಗಿದೆ. ಪರಸ್ಪರ ಸ್ನೇಹಿತರ ನಡುವೆ ನಡೆಯುವ ಮನುಷ್ಯ ಸಹಜ ಮಾತಿನ ಚಕಮುಕಿಗೆ ಕೋಮುಬಣ್ಣ ನೀಡಿ ಕಗ್ಗೊಲೆಗೆ ಪ್ರಚೋದನೆ ನೀಡುವ ಮನಸ್ಥಿತಿ ಮಾನವೀಯತೆಗೆ ಅತೀ ದೊಡ್ಡ ಸವಾಲಾಗಿದೆ.ಈ ಸವಾಲನ್ನು ಮೆಟ್ಟಿ ನಿಲ್ಲಲು ಸಮಾಜದ ಎಲ್ಲಾ ನಾಯಕರು ಒಟ್ಟಾಗಬೇಕು ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರೂ ಆಗಿರುವ ಮುಸ್ಲಿಂ ಜಮಾಅತ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್‌ಕೆ‌ಎಮ್ ಶಾಫಿ ಸ‌ಅದಿ ಹೇಳಿದ್ದಾರೆ. 

ಮಸೂದ್ ಅಮಾನುಷ ಹತ್ಯೆ ಸಂಬಂಧ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿದ ಅವರು, ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮಸೂದ್ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ  ಆಗ್ರಹಿಸಿದರು.

ಸಹೋದರ ಮಸೂದ್ ಅಗಲುವಿಕೆಯಿಂದ ನೋವು ಅನುಭವಿಸುತ್ತಿರುವ ಕುಟುಂಬಕ್ಕೆ ಅಲ್ಲಾಹು ಸ್ವಬೂರು ನೀಡಲಿ. ಮಸೂದ್‌ ಗೆ ಅಲ್ಲಾಹು ಸ್ವರ್ಗ ನೀಡಲಿ. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ನಾನು ಆಗ್ರಹಿಸುತ್ತೇನೆ ಎಂದರು.

ನಿಯೋಗದಲ್ಲಿ ಮೌಲಾನಾ ಇಸ್ಮಾಯಿಲ್ ಸಖಾಫಿ,ನಾಸಿರ್ ಲಕ್ಕಿ ಸ್ಟಾರ್,ಅಬ್ದುಲ್ ರಹಿಮಾನ್ ಮೊಗರ್ಪಣೆ,ಅಬ್ದುಲ್ ಹಮೀದ್ ಮಡಿಕೇರಿ,ಅಬೂಬಕ್ಕರ್ ಸಿದ್ದಿಕ್ ಕಾಜೂರು, ಇಮ್ತಿಯಾಜ್ ಶಿವಮೊಗ್ಗ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official