Posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮಂಗಳೂರು ವಿವಿ ಪುರುಷರ ಕಬಡ್ಡಿ ಪಂದ್ಯಾಟ

1 min read

ಬೆಳ್ತಂಗಡಿ; ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮಂಗಳೂರು ವಿವಿ ಪುರುಷರ ಕಬಡ್ಡಿ ಪಂದ್ಯಾಟ ಡಿ.8,9 ಮತ್ತು10 ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಂ ಜೋಸೆಫ್ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಜಂಟಿ ಆಯೋಜನೆಯೊಂದಿಗೆ ಈ‌ ಪಂದ್ಯಾಟ ನಡೆಯಲಿದ್ದು, 2021-22 ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಟ್ರೋಫಿ ಇದಾಗಿದೆ. ಮಂಗಳೂರು ವಲಯ ಮತ್ತು ಅಂತರ್ ವಲಯ‌ ಮಟ್ಟದಿಂದ ಮಂಗಳೂರು ವಲಯದ ನಾಲ್ಕು ತಂಡಗಳು ಮತ್ತು ಉಡುಪಿ ವಲಯದ ನಾಲ್ಕು ತಂಡಗಳು ಅಂತಿಮ ಸುತ್ತಿನಲ್ಲಿ ರೋಚಕ ಸ್ಪರ್ಧೆ ಏರ್ಪಡಲಿದೆ. 
ಮಂಗಳೂರು ವಿಶ್ವವಿದ್ಯಾನಿಲಯ ಸರಿಸುಮಾರು 40 ತಂಡಗಳು ಈಗಾಗಲೇ ನೊಂದಣಿ ಮಾಡಿವೆ. ಡಿ. 8 ರಂದು 10.00 ಗಂಟೆಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಡಾ.ಕಿಶೋರ್ ಕುಮಾರ್ ಸಿ.ಕೆ. ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ರೆ.ಫಾ.ಬೇಸಿಲ್ ವಾಸ್ , ಸಂಚಾಲಕರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
 ಡಿ. 10 ರಂದು 3.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳು ಅತಿ ವಂದನೀಯ ಆಂಟನಿ ಮೈಕಲ್ ಶೇರಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ಪಂದ್ಯಾಟದ ಕೋರ್ ಕಮಿಟಿಯ ಚೇರ್‌ಮೆನ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಡಾ.ಜೋಸೆಫ್ ಎನ್.ಎಂ. ಪಂದ್ಯಾಟದ ಸಂಪೂರ್ಣ ವಿವರ ನೀಡಿದರು.
ಮಂಗಳೂರು ವಿವಿ ಶರೀರಿಕ ನಿರ್ದೇಶಕ ಡಾ.‌ಜೆರಾಲ್ಡ್ ಸಂತೋಷ್ ಡಿಸೋಜ, ಸಂಘಟನಾ ಕಾರ್ಯದರ್ಶಿ ಪ್ರೊ.ಅಲೆಕ್ಸ್ ಐವನ್ ಸಿಕ್ವೆರಾ , ಶಾರೀರಿಕ ಶಿಕ್ಷಣ ನಿರ್ದೇಶಕ  ಪ್ರಕಾಶ್ ಡಿಸೋಜ , ನೆಲ್ಸನ್ ಮೋನಿಸ್ ಹಾಗೂ ಕೋರ್ ಸಮಿಟಿಯ ಸದಸ್ಯರಾದ ರಾಜಶೇಖರ ಶೆಟ್ಟಿ ಮತ್ತು ಫ್ರಾನ್ಸಿಸ್ ವಿವಿ ಉಪಸ್ಥಿತರಿದ್ದರು.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment