ಬೆಳ್ತಂಗಡಿ; ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸೌಹಾರ್ದ ದೀಪಾವಳಿ ಹಬ್ಬವನ್ನು ಅ.27 ರಂದು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ವಹಿಸಿದ್ದು ಸ್ವಾಗತಿಸಿದರು.
ದೀಪಾವಳಿ ಆಚರಣೆಯ ಮಹತ್ವ, ಅದರೊಳಗಿರುವ ಸೌಹಾರ್ದತೆಯ ಸಂದೇಶದ ಬಗ್ಗೆ ಅತಿಥಿ ಧರಣೇಂದ್ರ ಕೆ ಜೈನ್ ವಿವರಿಸಿದರು.
ದೀಪಾವಳಿ ಮತ್ತು ಸೌಹಾರ್ದತೆ ಎಂಬ ವಿಷಯದ ಬಗ್ಗೆ ಮುರಳಿ ಬಲಿಪ, ವಿನ್ಸೆಂಟ್ ಟಿ ಡಿಸೋಜಾ, ಅಶ್ರಫ್ ಆಲಿಕುಂಞಿ ಮುಂಡಾಜೆ, ಹೇಮಂತ ರಾವ್, ಸುರೇಶ್ ಶೆಟ್ಟಿ ಲಾಯಿಲ, ಕಿರಣ್ ಶೆಟ್ಟಿ, ರಾಮಕೃಷ್ಣ ಗೌಡ, ಕಿರಣ್ ದೊಂಡೊಲೆ ಮಾತನಾಡಿದರು.
ಸುಭಾಷಿಣಿ ದೀಪಾವಳಿ ಬಗೆಗಿನ ಸ್ವ ರಚಿತ ಕವನ ವಾಚಿಸಿದರು.
ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಶುಭ ಕೋರಿ ಪ್ರಾಂತ್ಯ ಸಮ್ಮೇಳನದ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಅನಂತಕೃಷ್ಣ, ಸುಶೀಲಾ ಹೆಗ್ಡೆ, ಸಹಕರಿಸಿದರು.ಮುಂದಕ್ಕೆ ಮುರಳಿ ಬಲಿಪ ಅವರ ತೋಟದ ಮನೆಯಲ್ಲಿ ಎಲ್ಲ ಧರ್ಮದ ಹಬ್ಬಗಳನ್ನು ಜೊತೆಯಾಗಿ "ಲಯನ್ಸ್ ರಾಷ್ಟ್ರೀಯ ಹಬ್ಬ" ಎಂಬುದಾಗಿ ಆಚರಿಸುವ ಬಗ್ಗೆ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.ಲಯನ್ಸ್ ಕ್ಲಬ್ ಕಾರ್ಯದರ್ಶಿ ತುಕಾರಾಮ ಬಿ ವಂದಿಸಿದರು.
----
ವರದಿ: ಅಚ್ಚು ಮುಂಡಾಜೆ