ಬೆಳ್ತಂಗಡಿ: ಉಜಿರೆಯ ಹಳೆಪೇಟೆ ನಿವಾಸಿ, ಉಜಿರೆ ರಬ್ಬರ್ ಸೊಸೈಟಿಯ ಹಿರಿಯ ಕಚೇರಿ ಸಹಾಯಕರಾಗಿದ್ದ ಗಿರಿಧರ ಗೌಡ (44) ಅವರು ಅಲ್ಪಕಾಲದ ಅಸೌಖ್ಯದಿಂದ ಅ.19 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಿ. ಮಂಜುನಾಥ ಮತ್ತು ವಿಮಲಾ ದಂಪತಿ ಪುತ್ರರಾಗಿದ್ದ ಅವರು 1998 ರಿಂದಲೇ ಉಜಿರೆ ರಬ್ಬರ್ ಸೊಸೈಟಿ ಸಿಬ್ಬಂದಿಯಾಗಿದ್ದು ಎಲ್ಲರಿಗೂ ಪರಿಚಿತರಾಗಿದ್ದರು. 9 ತಿಂಗಳ ಹಿಂದೆ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಉಜಿರೆ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅದಾಗ್ಯೂ ಅವರು ಅ.19 ರಂದು ಕೊನೆಯುಸಿರೆಳೆದಿದ್ದಾರೆ.
ಮೃತರ ಸಹೋದರ, ಉಜಿರೆ ಹಳೆಪೇಟೆ ಎಸ್‌ಪಿ ಆಯಿಲ್ ಮಿಲ್ ಬಳಿ ಕೋಳಿ ಅಂಗಡಿ ಹೊಂದಿದ್ದ ಉದಯ ಗೌಡ ಅವರು ಕೆಲ ತಿಂಗಳುಗಳ ಹಿಂದಷ್ಟೇ ಮೃತಪಟ್ಟಿದ್ದರು. ಇದೀಗ ಮೃತ ಗಿರಿಧರ ಗೌಡ ಅವರು ತಾಯಿ ವಿಮಲಾ, ನಾಲ್ವರು ಸಹೋದರರು, ಓರ್ವೆ ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
----
ವರದಿ; ಅಚ್ಚು ಮುಂಡಾಜೆ