ಬೆಳ್ತಂಗಡಿ: ತೆಕ್ಕಾರು ಗ್ರಾ.ಪಂ ಸದಸ್ಯರೊಬ್ಬರು ಸರಕಾರಿ ಜಾಗ ಹಾಗೂ ಕಟ್ಟಡವನ್ನು ಅತಿಕ್ರಮಣ ಮಾಡಿಕೊಂಡಿದ್ದು ಅದರ ವಿರುದ್ಧ ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ಅ.19 ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಯಿತು.
ಸರಕಾರಿ ಅಧಿಕೃತ ಭೇಟಿಗಾಗಿ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ತೆಕ್ಕಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಸ್‌ಡಿಪಿಐ ನಿಯೋಗ ಸಾರ್ವಜನಿಕ ಹಿತಾಸಕ್ತಿಯ ನೆಲೆಯಿಂದ ಅವರನ್ನು ಭೇಟಿ ಮಾಡಿ ಈ ಮನವಿ ಮಾಡಿದೆ.
ತೆಕ್ಕಾರು ಗ್ರಾಮ ಈ ಮೊದಲು ಬಾರ್ಯ ಗ್ರಾಪಂ ವ್ತಾಪ್ತಿಗೆ ಸೇರಿತ್ತು. ಆ ಬಳಿಕ ತೆಕ್ಕಾರು ಗ್ರಾ.ಪಂಚಾಯತ ಆಗಿ ಘೋಷಿಸಲ್ಪಟ್ಟು ಇದೀಗ ಪ್ರತ್ಯೇಕ ಪಂಚಾಯತ್ ಆಗಿದೆ. ಸದ್ರಿ ಪಂಚಾಯತ್ ಗೆ ಪ್ರತ್ಯೇಕ ಕಚೇರಿ ಕಟ್ಟಡ ಕಟ್ಟಲು ಗುರುತಿಸಿ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದ ಜಾಗ ತನ್ನದೆಂದು ಪ್ರತಿಪಾದಿಸುತ್ತಾ ಅಲ್ಲಿನ ಬಿಜೆಪಿ ಬೆಂಬಲಿತ ಸದಸ್ಯೆ ಯಮುನಾ ನಾಯ್ಕ್ ಎಂಬವರು ಅದನ್ನು ಅತಿಕ್ರಮಣ ಮಾಡಿಕೊಂಡು ಅದರಲ್ಲೇ ವಾಸ್ತವ್ಯ ಹೂಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು, ವಿಚಾರಣೆ ಇತ್ಯಾದಿ ನಡೆಯುತ್ತಲೇ ಬರುತ್ತಿದೆ.ಇದೀಗ ಮತ್ತೊಮ ಸದ್ರಿ ವಿಚಾರ ಡಿಸಿ ಅವರಿಗೆ ದೂರಿನ ಮೂಲಕ ಸಲ್ಲಿಕೆಯಾಗಿದೆ. ತನಿಖೆಯಲ್ಲಿ ಏನೇನಾಗಲಿದೆ ಎಂದು ಕಾದುನೋಡಬೇಕಾಗಿದೆ.
ಬುಧವಾರ ಡಿಸಿ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷ ಅಬ್ದುಲ್ ನಝೀರ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಅಬ್ದುಲ್ ರಝಾಕ್, ಪ್ರಮುಖರಾದ ನೌಶಾದ್, ಖಲಂದರ್, ಸಿನಾನ್, ಝಕರಿಯಾ, ಸಿದ್ದಿಕ್ ಬಾಜಾರ, ಇಂತಿಯಾಜ್, ಸಮದ್, ಯಾಸಿರ್,ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.