ಬೆಳ್ತಂಗಡಿ; ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ಹಿರಿಯ ಮರದ ವ್ಯಾಪಾರಿ ಎಂ ಹಾಮದ್ (86) ಅವರು ಅಲ್ಪ ಕಾಲದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಡಿ.5 ರಂದು ಮಂಗಳೂರಿನ ಖಾಸಗಿ ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರ ಆರೋಗ್ಯದಲ್ಲಿ ಶನಿವಾರ ಏರುಪೇರಾದ ಕಾರಣದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಅವರು ಗಂಗಾಧರ ಗೌಡರ ಬಹಳ ಆಪ್ತರಾಗಿದ್ದರು. ಮಡಂತ್ಯಾರು ಜುಮ್ಮಾ ಮಸ್ಜಿದ್ ನಲ್ಲಿ ಅಧ್ಯಕ್ಷರಾಗಿ, ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಹಿರಿಯ ಸದಸ್ಯರಾಗಿಠ ಸೇರಿದಂತೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಅವ್ವಮ್ಮ, ಮಕ್ಕಳಾದ ಇಬ್ರಾಹಿಂ, ಉಮರುಲ್ ಫಾರೂಕ್,ಝುಬೈದಾ, ಆಮಿನಾ, ರುಕಿಯಾ ಮತ್ತು ಸಲೀಕಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಸಚಿವ ಕೆ ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕರ್ತೋಡಿ, ನಿವೃತ ತಹಶಿಲ್ದಾರ್ ಅಬ್ದುಲ್ ರಹಿಮಾನ್, ಕೆಪಿಸಿಸಿ ಲೇಬರ್ ಸೆಲ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಸುಪದ್ಮ ನಿವಾಸಿ ನಿತ್ಯಾನಂದ ಬಿ, ಯುವ ಕಾಂಗ್ರೆಸ್ ಮುಖಂಡ ಅಭಿನಂದನ್ ಹರೀಶ್ ಕುಮಾರ್, ಜಮೀಯತುಲ್ ಫಲಾಹ್ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಮೊದಲಾದ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್‌ಸಿ ಹರೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.