ಬೆಳ್ತಂಗಡಿ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ತಾಲೂಕಿನಲ್ಲಿ 46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳಿಗೆ ಡಿ.27 ರಂದು ಚುನಾವಣೆ ನಡೆಯಲಿದ್ದು ಇದಕ್ಕಾಗಿ 1729 ಮಂದಿ ನಾಮಪತ್ರದ ಮೂಲಕ ತಮ್ಮ ಉಮೇದ್ವಾರಿಕೆ ಸಲ್ಲಿಸಿದ್ದಾರೆ.
ಯಾವ್ಯಾವ ಪಂಚಾಯತ್, ಎಷ್ಟೆಷ್ಟು ನಾಮಪತ್ರ;
46 ಗ್ರಾ.ಪಂ.ಗಳ ಪೈಕಿ ನಾರಾವಿ 15 ಸ್ಥಾನಗಳಿಗೆ 40, ಮರೋಡಿ 11 ಸ್ಥಾನಗಳಿಗೆ 28, ಹೊಸಂಗಡಿ 12 ಸ್ಥಾನಗಳಿಗೆ 30, ಕಾಶಿಪಟ್ಣ7 ಸ್ಥಾನಗಳಿಗೆ 19, ಅಂಡಿಂಜೆ 13 ಸ್ಥಾನಗಳಿಗೆ 29, ಅಳದಂಗಡಿ 12 ಸ್ಥಾನಗಳಿಗೆ 38, ಸುಲ್ಕೇರಿ 7 ಸ್ಥಾನಗಳಿಗೆ 17, ಬಳಂಜ 13 ಸ್ಥಾನಗಳಿಗೆ 30, ಶಿರ್ಲಾಲು 11 ಸ್ಥಾನಗಳಿಗೆ 25, ಕುಕ್ಕೇಡಿ 11 ಸ್ಥಾನಗಳಿಗೆ 46, ಪಡಂಗಡಿ 17 ಸ್ಥಾನಗಳಿಗೆ 45, ಮಾಲಾಡಿ18 ಸ್ಥಾನಗಳಿಗೆ 44, ಕುವೆಟ್ಟು 25 ಸ್ಥಾನಗಳಿಗೆ 76, ಮೇಲಂತಬೆಟ್ಟು 12 ಸ್ಥಾನಗಳಿಗೆ 28, ಲಾಯಿಲ 20 ಸ್ಥಾನಗಳಿಗೆ 66, ನಡ 14 ಸ್ಥಾನಗಳಿಗೆ 38, ನಾವೂರು 8 ಸ್ಥಾನಗಳಿಗೆ 23, ಇಂದಬೆಟ್ಟು 11 ಸ್ಥಾನಗಳಿಗೆ 28, ಮಲವಂತಿಗೆ 8 ಸ್ಥಾನಗಳಿಗೆ 20 ಮಿತ್ತಬಾಗಿಲು 10 ಸ್ಥಾನಗಳಿಗೆ 24, ಕಡಿರುದ್ಯಾವರ 9 ಸ್ಥಾನಗಳಿಗೆ 24, ನೆರಿಯಾ 17 ಸ್ಥಾನಗಳಿಗೆ 41, ಚಾರ್ಮಾಡಿ 28 ಸ್ಥಾನಗಳಿಗೆ 84, ಮುಂಡಾಜೆ 11 ಸ್ಥಾನಗಳಿಗೆ 28, ಕಲ್ಮಂಜ 10 ಸ್ಥಾನಗಳಿಗೆ 22, ಉಜಿರೆ 34 ಸ್ಥಾನಗಳಿಗೆ 74, ಕೊಯ್ಯೂರು 13 ಸ್ಥಾನಗಳಿಗೆ 41, ಕಳಿಯ 15 ಸ್ಥಾನಗಳಿಗೆ 50, ಮಡಂತ್ಯಾರು 16 ಸ್ಥಾನಗಳಿಗೆ 46, ಮಚ್ಚಿನ 14 ಸ್ಥಾನಗಳಿಗೆ 38, ತಣ್ಣೀರುಪಂಥ 22 ಸ್ಥಾನಗಳಿಗೆ 81, ಬಾರ್ಯ 17 ಸ್ಥಾನಗಳಿಗೆ 59, ತೆಕ್ಕಾರು 9 ಸ್ಥಾನಗಳಿಗೆ 26, ಇಳಂತಿಲ 14 ಸ್ಥಾನಗಳಿಗೆ 42, ಕಣಿಯೂರು 20 ಸ್ಥಾನಗಳಿಗೆ 51, ಬಂದಾರು 16 ಸ್ಥಾನಗಳಿಗೆ 36, ಬೆಳಾಲು 12 ಸ್ಥಾನಗಳಿಗೆ 30, ಧರ್ಮಸ್ಥಳ 25 ಸ್ಥಾನಗಳಿಗೆ 60, ಪುದುವೆಟ್ಟು 9 ಸ್ಥಾನಗಳಿಗೆ 24, ಪಟ್ರಮೆ 6 ಸ್ಥಾನಗಳಿಗೆ 17, ಕೊಕ್ಕಡ 13 ಸ್ಥಾನಗಳಿಗೆ 35, ನಿಡ್ಲೆ 8 ಸ್ಥಾನಗಳಿಗೆ 17, ಕಳೆಂಜ 13 ಸ್ಥಾನಗಳಿಗೆ 32, ಶಿಶಿಲ 6 ಸ್ಥಾನಗಳಿಗೆ 23, ಶಿಬಾಜೆ 6 ಸ್ಥಾನಗಳಿಗೆ 16, ಅರಸಿನಮಕ್ಕಿ 13 ಸ್ಥಾನಗಳಿಗೆ 38 ಹೀಗೆ ಒಟ್ಟು ಸೇರಿ 1729 ನಾಮಪತ್ರಗಳು ಸಲ್ಲಿಕೆಯಾಗಿದೆ.
ನಾಮಪತ್ರಗಳ ಪರಿಶೀಲನೆ ಬಳಿಕ ಅಂತಿಮಕಣದಲ್ಲಿ ಯಾರೆಲ್ಲ ಉಳಿಯಲಿದ್ದಾರೆ ಹಾಗೂ ಗೆಲುವು ಕಾಣಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.