ಬೆಳ್ತಂಗಡಿ; ಉಜಿರೆಯ ಉದ್ಯಮಿ ಬಿಜೊಯ್ ಅವರ ಪುತ್ರ ಅನುಭವ್ ಅಪಹರಣ ಪ್ರಕರಣದ ಆರೋಪಿಗಳನ್ನು ಮುಂದಿನ 10 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ ನೀಡಿದ್ದು ಎಲ್ಲ ಆರೋಪಿಗಳೂ ಈಗ ಬೆಳ್ತಂಗಡಿ ಠಾಣೆಯ ಬಂಧಿಖಾನೆಯಲ್ಲಿ ದಿನ ಕಳೆಯುವಂತಾಗಿದೆ.
ಮುಂದಿನ 10 ದಿನಗಳಲ್ಲಿ ತನಿಖಾಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ತನಿಖಾ ತಂಡ ಎಲ್ಲಾ ಆರೋಪಿಗಳನ್ನು ಡ್ರಿಲ್ ಮಾಡಲಿದ್ದು, ಅಪಹರಣ ಪ್ರಕರಣದ ಮಹತ್ವದ ಮಾಹಿತಿಗಳನ್ನು ಎಳೆಎಳೆಯಾಗಿ ಹೊರಗೆಳೆಯಲಿದ್ದಾರೆ.
ಬಂಧಿತರಾದ ಮಂಡ್ಯ ದೇವಳಕೆರೆ ಗ್ರಾಮದ ರಂಜಿತ್(22ವ.), ಮಂಡ್ಯ ಕೋಡಿಕೆರೆ ಗ್ರಾಮದ ಹನುಮಂತು(21ವ.), ಮೈಸೂರು ವಡಂತಹಳ್ಳಿ ಗ್ರಾಮದ ಗಂಗಾಧರ (25ವ.), ಬೆಂಗಲಕೂರಿ ದೊಡ್ಡಮ್ಮನ ಹಳ್ಳದ ಕಮಲ್ ( 22ವ.), ಮಾಲೂರಿನ ಕೂರ್ನ ಹೊಸಹಳ್ಳಿಯ ಮಂಜುನಾಥ(24ವ.) ಮತ್ತು ಮಹೇಶ್ (26ವ.) ಎಂಬವರು ಇದೀಗ ಪೊಲೀಸ್ ಬಲೆಯಲ್ಲಿದ್ದು, ಪ್ರಮುಖ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಡಿ.23 ರಂದು ಸಂದೇಶ್ ನೇತ್ರತ್ವದ ಪೊಲೀಸ್ ತಂಡ ಕೋಲಾರಕ್ಕೆ;
ಪ್ರಕರಣದ ಆರೋಪಿಗಳನ್ನು ಮೊಬೈಲ್ ಫೋನ್ ಕರೆ ಆಧರಿಸಿ ಸೈಬರ್ ತನಿಖಾ ಮಾರ್ಗದ ಮೂಲಕ ಖೆಡ್ಡಾಕ್ಕೆ ಕೆಡವಲಾಗಿದ್ದು, ಪ್ರಕರಣ ಪೂರ್ಣ ವಿವರ ತಿಳಿಯಲು ಮತ್ತು ವೀಡಿಯೋ ದಾಖಲೆಯೊಂದಿಗಿನ ಮಹಜರು ಪ್ರಕ್ರೀಯೆ ಕೈಗೊಳ್ಳಲು ಸದ್ರಿ ಪ್ರಕರಣದ ಪ್ರಧಾನ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ನೇತೃತ್ವದ ತಂಡ ಡಿ. 23 ರಂದು ಬೆಳ್ತಂಗಡಿ ಯಿಂದ ಕೋಲಾರಕ್ಕೆ ತೆರಳಲಿದೆ. ಆರೋಪಿಗಳನ್ನೂ ಕೋಲಾರಕ್ಕೆ ಹೊತ್ತೊಯ್ದು ಎಲ್ಲ ತನಿಖೆ ಮುಗಿಸಿಕೊಳ್ಳಲಿದೆ.
ರವಿವಾರ ಬೆಳಿಗ್ಗಿನ ಜಾವಾ ಆರೋಪಿಗಳನ್ನು ನ್ಯಾಯಾಧೀಶ ಮನೆಗೆ ಹಾಜರುಪಡಿಸಿದ ಸರ್ಕಲ್ ಇನ್ಸ್‌ಪೆಕ್ಟರ್;
ಆರೋಪಿಗಳನ್ನು ರವಿವಾರ ಬೆಳ್ಳಂಬೆಳಗ್ಗೆ 5.30 ಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಬಳಸಿದ ಕಾರು ಮತ್ತು ಇತರ ವಾಹನಗಳೇನಾದರೂ ಇದ್ದರೆ ಅದನ್ನು ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ಬಾಕಿ ಇದೆ.
ಬಾಲಕನ ಮನೆಯಲ್ಲಿ ಭೇಟಿನೀಡಿದವರಿಗೆಲ್ಲ ಸಹಿತಿಂಡಿ;
ಇತ್ತ ಬಾಲಕನನ್ನು ನೋಡಲು ಮತ್ತು ಕುಶಲೋಪರಿ ವಿಚಾರಿಸಲು ಆವರ ಕುಟುಂಬವರ್ಗದವರು, ಬಂಧುಗಳು, ನೆರೆಹೊರೆಯವರು ಮನೆಗೆ ಆಗಮಿಸುತ್ತಿದ್ದು ಎಲ್ಲರಿಗೂ ಮನೆಯವರು ಸಿಹಿತಿಂಡಿ ನೀಡಿ ಸಂಭ್ರಮಿಸುತ್ತಿದ್ದಾರೆ.
ಎರಡು ದಿನಗಳಲ್ಲಿ ಕಾರ್ಮೋಢ ಕವಿದಂತಿದ್ದ ಮನೆಯ ವಾತಾವರ ಈಗ ಹಬ್ಬದ ರೂಪಕ್ಕೆ ತಿರುಗಿದೆ.
ಬಾಲಕನತಂದೆ, ತಾಯಿ, ಅಪಹರಣದ ವೇಳೆ ಜೊತೆಗಿದ್ದ ಬಾಲಕನ ಅಜ್ಜ ಎಲ್ಲರೂ ಕೂಡ, ತಮ್ಮ ನೋವಿನಲ್ಲಿ ತಮ್ಮವರಾಗಿ ಸ್ಪಂದಿಸಿದ ಪೋಲೀಸರಿಗೆ, ನೈತಿಕ ಬೆಂಬಲ ನೀಡಿದ ಊರವರಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ, ಧೈರ್ಯ ತುಂಬಲು ಬಂದವರಿಗೆ ಆಭಾರಮನ್ನಣೆ ಸಲ್ಲಿಸುತ್ತಿದ್ದಾರೆ.