ಬೆಳ್ತಂಗಡಿ; ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯೂನಿಟಿ ಡೆವೆಲಪ್ಮೆಂಟ್ ಬೆಳ್ತಂಗಡಿ ಹಾಗೂ ದಾನಿಗಳ ಸಹಕಾರದಿಂದ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡಲು ತೀರ್ಮಾನಿಸಿದ್ದು, ಮನೆ ನಿರ್ಮಾಣದ ಕಾಮಗಾರಿಗೆ ಜುಮ್ಮಾ ಮಸೀದಿಯ ಖತೀಬ್ ಅನ್ವರುದ್ದೀನ್ ಫೈಝಿ ಬುರ್ಹಾನಿ ಚಾಲನೆ ನೀಡಿದರು.
ಪಾಪ್ಯುಲರ್ ಫ್ರಂಟ್ ಪುತ್ತೂರು ಝೋನ್ ಅಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ,ಬದ್ರಿಯಾ ಜುಮ್ಮಾ ಮಸ್ಜಿದ್ ಪಾಂಡವರಕಲ್ಲು ಇದರ ಗೌರವಾಧ್ಯಕ್ಷ ಪುತ್ತುಮೋನು ಕುದುರು,
ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿಕೆ,ಪಾಪ್ಯುಲರ್ ಫ್ರಂಟ್ ಮಡಂತ್ಯಾರ್ ವಲಯಾಧ್ಯಕ್ಷ ಬಿ ಎಮ್ ರಝ್ಝಾಕ್, ಬಡಗಕಜೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ SDPI ಮುಖಂಡ ಅತಾವುಲ್ಲಾ ಪಾಂಡವರಕಲ್ಲು,ಜಮಾಅತ್ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಮ್ಯೂನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ಇದು ಸಮಾನ ಮನಸ್ಕ ಬಂಧುಗಳ ವಾಟ್ಸ್ ಆಪ್ ಸಮಿತಿಯಾಗಿದ್ದು ಹಲವು ದಾನಿಗಳ ಸಹಕಾರದಿಂದ ಮೂರು ಮನೆಗಳನ್ನು ಈಗಾಗಲೇ ನಿರ್ಮಿಸಿಕೊಟ್ಟಿದೆ. ಇದೀಗ ಬಂಗಾಡಿ ಹಾಗೂ ಪಾಂಡವರಕಲ್ಲು ಎಂಬಲ್ಲಿ ಎರಡು ಕಡೆ ಮನೆ ನಿರ್ಮಿಸುತ್ತಿದ್ದು,ಇದು ನಾಲ್ಕನೇ ಐದನೇ ಮನೆಯಾಗಿದೆ.