ಬೆಳ್ತಂಗಡಿ: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಭೇಟಿ ನೀಡಿದರು.
ಹಾಸನದಿಂದ ರಸ್ತೆಮಾರ್ಗವಾಗಿ ಬಂದ ಅವರು ಧರ್ಮಸ್ಥಳದಿಂದ ಮಂಗಳೂರು ಪ್ರಯಾಣದ ಮಧ್ಯೆ ಪೂರ್ವನಿರ್ಧರಿತ ಕಾರ್ಯಕ್ರಮದಂತೆ ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ಭೇಟಿ ನೀಡಿದರು.
ಈ ವೇಳೆ ಅವರನ್ನು ಪುತ್ತೂರು ಉಪವಿಭಾಗದ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಈ ವೇಳೆ ತಹಶಿಲ್ದಾರ ಮಹೇಶ್ ಜೆ ಉಪಸ್ಥಿತರಿದ್ದರು.