Posts

ಉಜಿರೆ ಬಾಲಕನ ಅಪಹರಣದ ಹಿಂದೆ ಹಣಕಾಸು ವ್ಯವಹಾರದ ವಾಸನೆ!

1 min read

ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಗುರುವಾರ ಸಂಜೆವೇಳೆ ಅಜ್ಜನ ಜೊತೆ ವಾಕಿಂಗ್ ಹೋಗಿದ್ದ 8 ವರ್ಷದ ಬಾಲಕನನ್ನು ಕಾರಿನಲ್ಲಿ‌ ಬಂದಿದ್ದ ನಾಲ್ವರು ಅಪಹರಿಸಿದ್ದಾರೆಂಬ ಸುದ್ದಿಯ ಹಿಂದೆ ಹಣಕಾಸು ವ್ಯವಹಾರದ ವಾಸನೆ ಬಡಿಯಲಾರಂಭಿಸಿದೆ‌

ಸೋಷಿಯಲ್ ಮೀಡಿಯಾದಲ್ಲಿ ಅಪಹರಣದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಸದ್ರಿ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಉಜಿರೆಯ ಹಿರಿಯ ಉದ್ಯಮಿ,‌ಮಾಜಿ ಸೈನಿಕ ಎ.ಕೆ‌ ಶಿವನ್ ಅವರ ಪುತ್ರ ಬಿಜೊಯ್ ಅವರ ಪುತ್ರನೇ ಅಪಹರಣವಾದ ಬಾಲಕ ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದೆ.

                              (ಬಾಲಕನ ಕುಟುಂಬ)


ಎಂದಿನಂತೆ ರಥಬೀದಿ‌ ಕಡೆಗೆ ಅಜ್ಜ ಸಂಜೆ ವಾಯು ವಿಹಾರಕ್ಕೆ ಹೋಗಿದ್ದಾಗ ಜೊತೆಗೆ ತೆರಳಿದ್ದ ಮೊಮ್ಮಗನನ್ನು ಏಕಾಏಕಿ ಕಾರಿನಲ್ಲಿ ಬಂದ ತಂಡ ಕುಳ್ಳಿರಿಸಿಕೊಂಡು ಹೋಗಿದೆ. ಬಾಲಕನಿಗಿಂತ ಸ್ವಲ್ಪ ಹಿಂದೆ ಇದ್ದ ಅಜ್ಜ ಕಾರಿನ ಬಳಿ ಓಡಿ ತೆರಳುವಷ್ಟರಲ್ಲಿ ವಾಹನ ಮುಂದ ಚಲಿಸಿದೆ ಎಂದು ಗೊತ್ತಾಗಿದೆ. 

ಬಾಲಕನನ್ನು ಅಪಹರಣ ಮಾಡಿದ ಇಂಡಿಕಾ ಕಾರು ಬಿಳಿ ಬಣ್ಣದ್ದಾಗಿದ್ದು, ಹಳದಿ ನಂಬರ್ ಪ್ಲೇಟ್ (ಟೂರಿಸ್ಟ್ ರಿಜಿಸ್ಟ್ರೇಷನ್) ಹೊಂದಿತ್ತೆಂದು ಮೆಸೇಜ್‌ಗಳಲ್ಲಿ ವ್ಯಾಪಕ  ಸಂದೇಶ ರವಾನೆಯಾಗಿದೆ. 

ಕಾರಿನ ನಂಬರ್ ಕೂಡ ಕೆಲವು ಗ್ರೂಪುಗಳಲ್ಲಿ ಹರಿದಾಡುತ್ತಿದ್ದು ಅದರ ದಾಖಲೆಪತ್ರಗಳನ್ನು ಗೂಗಲ್ ಮೂಲಕ ಪರಿಶೀಲಿಸಿದಾಗ ಅದು ಮೋಟಾರು ಕ್ಯಾಬ್(ಎಲ್.ಪಿ.ವಿ) ಎಂದೂ, ರವಿ ರಾಮು ರಾಥೋಡ್ ಅವರ ಹೆಸರಿನಲ್ಲಿರುವುದಾಗಿ ಮಾಹಿತಿ ಲಭಿಸುತ್ತಿದೆ. ಅಲ್ಲದೆ ಅದರ ಇನ್ಸುರೆನ್ಸ್ 2021 ನೇ ಫೆಬ್ರವರಿ20 ರ ವರೆಗೆ ಇರುವುದಾಗಿ ತೋರಿಸುತ್ತಿದೆ.

ಡಿವೈಎಸ್‌ಪಿ ಉಜಿರೆಯಲ್ಲಿ‌ ಮೊಕ್ಕಾಂ...ತನಿಖೆಗೆ ತಂಡಗಳ ರಚನೆ; 

ಘಟನೆಯ ತನಿಖೆ ಚುರುಕುಗೊಂಡಿದ್ದು, ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರು ಉಜಿರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ನೇತ್ರತ್ವದಲ್ಲಿ ಎಲ್ಲ ಸಬ್ ಇನ್ಸ್‌ಪೆಕ್ಟರ್ ಗಳನ್ನು ಸೇರಿಸಿ ಹಲವು ತಂಡಗಳನ್ನು ರಚಿಸಿದ್ದು ಕಾರ್ಯಾಚರಣೆ ಆರಂಭವಾಗಿದೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ‌ ವಾಹನ ತಪಾಸಣೆ ಚುರುಕುಗೊಳಿಸಲಾಗಿದೆ.

ಕೊಟ್ಟಿಗೆಹಾರ, ಉಪ್ಪಿನಂಗಡಿ, ಧರ್ಮಸ್ಥಳ ನಾರಾವಿ ಹೀಗೆ ಎಲ್ಲೆಡೆ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ಪರಿಶೀಲಿಸಿ ಹೊರಬಿಡಲಾಗುತ್ತಿದೆ.

ಕಾರಿನಲ್ಲಿ ಇದ್ದ ನಾಲ್ವರು ಕೃತ್ಯವೆಸಗಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಹರಿದಾಡಿದೆ. ಬಂದವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದೂ ಹೇಳಲಾಗುತ್ತಿದ್ದು ಹೊರರಾಜ್ಯದ ತಂಡ ಕೃತ್ಯವೆಸಗಿದ್ದೇ ಎಂಬ ಗುಮಾನಿ ಎದ್ದಿದೆ.

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಅಪಹರಣ ಪ್ರಹಸನ ನಡೆದಿದೆ ಎಂಬ ಬಗ್ಗೆಯೂ ಗುಮಾನಿ ಇದೆ. ಇನ್ನೊಂದು ಅರ್ಥದಲ್ಲಿ ಸದ್ರಿ‌ ಕುಟುಂಬದ ಹಿನ್ನಲೆ ಅರಿತಿರುವವರೇ ಹೊಂಚುಹಾಕಿ, ಮಾಹಿತಿಗಳನ್ನು ಕಲೆಹಾಕಿ ಕೃತ್ಯವೆಸಗಿರಲೂ ಬಹುದು ಎಂಬ ಅನುಮಾನವೂ ಇದೆ. ಬಲ್ಲ ಮೂಲವೊಂದರ ಪ್ರಕಾರ ಅಪಹರಣಕಾರರು ಸಂಪರ್ಕ ಮಾಡಿದ್ದಾರೆಂದೂ, ಬಹು‌ಮೊತ್ತದ ಬೇಡಿಕೆ ಇಟ್ಟಿದ್ದಾರೆಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ  ಖಚಿತಗೊಂಡಿಲ್ಲ.

ಒಟ್ಟಾರೆ ಬೆಳವಣಿಗೆಯಲ್ಲಿ ಸಾರ್ವಜನಿಕರೂ ಕೂಡ ಪೊಲೀಸರ ಕಾರ್ಯಾಚರಣೆ ಜೊತೆ ಕೈ ಜೋಡಿಸಿದ್ದು  ಅವರೂ ಕೂಡ  ಸಹಕಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment