ಬೆಳ್ತಂಗಡಿ; ರಾಷ್ಟಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ಅವರು ತನ್ನ 63 ನೇ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಗುಂಡೂರಿಯ ಶ್ರೀಗುರುಚೈತನ್ಯ ಸೇವಾಶ್ರಮದ ಆಶ್ರಮವಾಸಿಗಳ ಜತೆ ಸೇರಿ ಆಚರಿಸಿದರು.
ವಿಟ್ಲದ ಅಧ್ಯಾಪಕರ ಸಹಕಾರ ಸಂಘ(ರಿ)ಇದರ ಅಧ್ಯಕ್ಷರಾಗಿ ದುಡಿದು ಜನಮಣ್ಣನೆ ಪಡೆದ ಇವರು ಬಂಟ್ವಾಳದ ರಾಯಿ ಎಂಬಲ್ಲಿನ ನಿವಾಸಿಯಾಗಿದ್ದು ,ಇದೇ ತಾಲೂಕಿನ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆದ್ದಳಿಕೆಯಲ್ಲಿ ಮುಖ್ಯೋಪಾಧ್ಯಾಯರಾಗಿ ದುಡಿದು ನಿವೃತ್ತಿ ಹೊಂದಿದ್ದರು. ನಿವೃತ್ತಿ ನಂತರ ಸಮಾಜದ ಹತ್ತು ಹಲವು ಸಮಾಜಮುಖಿ ಕೆಲಸದಲ್ಲಿ ತೊಡಗಿ ನೊಂದವರ ಪಾಲಿಗೆ ನೆರಳಾಗಿ ಜನಸೇವಕ ಎಂದು ಮನೆಮಾತಾಗಿದ್ದಾರೆ. ಅವರ ಭಾವನೆಯಂತೆಯೇ ತನ್ನ 63 ನೇ ವರ್ಷದ ಹುಟ್ಟುಹಬ್ಬವನ್ನು ತನ್ನ ಮಗ ಕಾರ್ತಿಕ್ ಹಾಗು ಸೊಸೆ ದಿವ್ಯಾಕಾರ್ತಿಕ್ ರವರ ಹಾಗು ಗೆಳೆಯವರ್ಗದವರ ಸಹಕಾರದಿಂದ ಈ ಸೇವಾಶ್ರಮದ ಆಶ್ರಮವಾಸಿಗಳ ಜತೆ ಆಚರಿಸಿಕೊಂಡಿದ್ದಾರೆ.
ಸೇವಾಶ್ರಮವಾಸಿಗಳಿಗೆ 15 ದಿವಸಕ್ಕಾಗುವಷ್ಟು ದಿನಸಿ ನೀಡಿ ,ಕೇಕ್ ಕತ್ತರಿಸಿ ಆಶ್ರಮವಾಸಿಗಳಿಗೆ ತಿನ್ನಿಸಿ ಸಂಭ್ರಮಾಚರಿಸಿದರು.
ಮೈಕಲ್ ಸಿದ್ದಕಟ್ಟೆ, ಗಣೇಶ್ ನಾಯಕ್, ಹರಿಪ್ರಸಾದ್, ಗಣೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಅರಂಬೋಡಿಯ ರೋಟರಿಕ್ಲಬ್ ನ ರಾಘವೇಂದ್ರ ಭಟ್ ಸ್ವಾಗತಿಸಿದರೆ, ಅಶೋಕ್ ನೇರಳಪಲ್ಕೆ ನಿರೂಪಿಸಿ ,ಶ್ರೀಗುರುಚೈತನ್ಯ ಸೇವಾಶ್ರಮದ ನಿರ್ದೇಶಕ ಹೊನ್ನಯ್ಯ ಕಾಟಿಪಳ್ಳ ಧನ್ಯವಾದ ಅರ್ಪಿಸಿದರು.