Posts

ಮಡಂತ್ಯಾರಿನಲ್ಲಿ ಮಂಗಳೂರು ವಿವಿ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಉದ್ಘಾಟನೆ

1 min read


ಬೆಳ್ತಂಗಡಿ; ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ರತ್ನವರ್ಮ ಹೆಗ್ಗಡೆ ಟ್ರೋಫಿ ಪುರುಷರ ಕಬಡ್ಡಿ ಪಂದ್ಯಾಟ ಡಿ. 8, 9 ಮತ್ತು10 ರಂದು ನಡೆಯಲಿದ್ದು ಇದರ ಉದ್ಘಾಟನೆಯು ಮಡಂತ್ಯಾರು ಒಳಾಂಗಣ ಕ್ರೀಡಾಂಗಣದಲ್ಲಿ ಡಿ.8 ರಂದು ನಡೆಯಿತು.

ಮಂಗಳೂರು ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ. ಕಿಶೋರ್ ಕುಮಾರ್ ಉದ್ಘಾಟಿಸಿದರು.


ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ.ಬೇಸಿಲ್ ವಾಸ್  ಅಧ್ಯಕ್ಷತೆಯನ್ನು ವಹಿಸಿದ್ದರು.

ಸಮಾರಂಭದಲ್ಲಿ ಕರ್ನಾಟಕ ಕಾಲೇಜು ಶಿಕ್ಷಣದ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ.‌ಜೆನಿಫರ್ ಲೋಲಿಟ ಪ್ರಧಾನ ಅತಿಥಿಗಳಾಗಿದ್ದರು. 

ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಂತೋಷ್ ಡಿಸೋಜಾ, ಲೆಕ್ಸಾ ಲೈಟಿಂಗ್ಸ್ ಟೆಕ್ನಾಲಜಿ ಲಿ.‌ಮೂಡಬಿದ್ರೆ ಇದರ ಕಾರ್ಯನಿರ್ವಾಹಕ ನಿರ್ದೇಶಕ‌ ಹಾಗೂ ಸಂಸ್ಥಾಪಕ ರೊನಾಲ್ಡ್ ಸಿಲ್ವನ್ ಡಿಸೋಜಾ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಕಬಡ್ಡಿ ಪಟು ಬಿ ಉದಯ ಚೌಟ, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಉದ್ಯಮಿ ಹೈದರ್ ಮಡಂತ್ಯಾರು, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿವಿ, ಶಿಕ್ಷಕ ರಕ್ಷಕ ಸಂಘಗ ಅಧ್ಯಕ್ಷ ಜಯರಾಂ ಶೆಟ್ಟಿ ಶುಭ ಕೋರಿದರು. ಸಂಘಟನಾ ಕಾರ್ಯದರ್ಶಿ ಪ್ರೊ.ಅಲೆಕ್ಸ್ ಐವನ್ ಸಿಕ್ವೆರಾ, ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕ  ಪ್ರಕಾಶ್ ಡಿಸೋಜ ಇವರು ಉಪಸ್ಥಿತರಿದ್ದರು. 

ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಂ ಜೋಸೆಫ್ ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಾಧ್ಯಾಪಕ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. 

ಸನ್ಮಾನ; 

ಕ್ರೀಡಾ ತೀರ್ಪುಗಾರ ಮುಗೆರೋಡಿ ಸಂಜೀವ ಶೆಟ್ಟಿ, ಖ್ಯಾತ ಸಾಧಕ ಕ್ರೀಡಾ ಪಟುಗಳಾದ ಬೀನಾ ಫೆರ್ನಾಂಡೀಸ್ ಮತ್ತು ಡೆನ್ನಿಸ್ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂದ್ಯಾಕೂಟದಲ್ಲಿ

ಮಂಗಳೂರು ವಿಶ್ವವಿದ್ಯಾನಿಲಯ ಸರಿಸುಮಾರು 40 ತಂಡಗಳು ನೊಂದಣಿ ಮಾಡಿಕೊಂಡಿದ್ದು ಹಾಜರಿದ್ದರು. 

-------

ಡಿ. 10 ರಂದು 3.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅತಿ ವಂದನೀಯ ಆಂಟನಿ ಮೈಕಲ್ ಶೇರಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment