ಬೆಳ್ತಂಗಡಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಋಣಮುಕ್ತ ಹೋರಾಟ ಸಮಿತಿ ಸಹಿತ ನ್ಯಾಯವಾದಿ ಬಿ. ಎಂ ಭಟ್ ನಾಯಕತ್ವದ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ, ಭಾರತ ಬಂದ್ ಬೆಂಬಲಿಸಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ಬೃಹತ್ ಪ್ರತಿಭಟನೆ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು.
ಮಾಜಿ ಶಾಸಕ ವಸಂತ ಬಂಗೇರ, ಕಾರ್ಮಿಕ ಸಂಘಟನೆ ನಾಯಕ ಬಿ.ಎಮ್ ಭಟ್ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್,ರಂಜನ್ ಜಿ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಪ್ರಮುಖರಾದ ಅಶ್ರಫ್ ನೆರಿಯ, ಶೇಖರ್ ಕುಕ್ಕೇಡಿ, ಪಿ ಧರಣೇಂದ್ರ ಕುಮಾರ್, ಅಬ್ದುಲ್ ರಹಮಾನ್ ಪಡ್ಪು, ಪ್ರಭಾಕರ ಶಾಂತಿಕೋಡಿ, ಪ್ರವೀಣ್, ಬಿ.ಕೆ ವಸಂತ್, ಚಂದು ಎಲ್, ವೆಂಕಣ್ಣ ಕೊಯ್ಯೂರು, ಹೈದರ್ ಗುರುವಾಯನಕೆರೆ, ದಯಾನಂದ ಬೆಳಾಲು, ಹಾಜಿರಾ ಬಾನು, ಮುಹಮ್ಮದ್ ರಫಿ, ಮೆಹಬೂಬ್ ಸಂಜಯನಗರ, ವಿನ್ಸೆಂಟ್ ಡಿಸೋಜಾ, ನೆಬಿಸ, ಕ್ಲೇರಾ ಮುಂಡಾಜೆ, ರಾಮಚಂದ್ರ , ಕಿರಣ ಪ್ರಭಾ, ಕುಮಾರಿ, ಶ್ರೀದರ ಮಚ್ಚಿನ, ಪುಷ್ಪಾ, ಜಯಶ್ರೀ, ಜಯರಾಮಮಯ್ಯ, ನಾರಾಯಣ ಕೈಕಂಬ, ಧನಂಜಯ ಗೌಡ, ಮೊದಲಾದವರು ಉಪಸ್ಥಿತರಿದ್ದರು.