ಬೆಳ್ತಂಗಡಿ: ಕೊರೋನ ಲಾಕ್‌ಡೌನ್‌ನಿಂದ ಹಲವು ಕುಟುಂಬಗಳು ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ಕಾಜೂರು ಯುವಕರ ತಂಡವೊಂದು ಅನಿವಾಸಿ ಭಾರತೀಯರ ಸಹಕಾರ ಮತ್ತು ಊರಿನ ದಾನಿಗಳ ನೆರವಿನೊಂದಿಗೆ 1.50 ಲಕ್ಷ ರೂ.ವೆಚ್ಚದಲ್ಲಿ ಆಹಾರದ ಕಿಟ್ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಕಾಜೂರು ಜಮಾಅತ್ ಗೆ ಒಳಪಟ್ಟ ನೆಲ್ಲಿಗುಡ್ಡೆ ಜೀ'ನಗರ ಸೇರಿದಂತೆ 160 ರಷ್ಟು ಕುಟುಂಬಗಳಿಗೆ ತಲಾ ಹತ್ತು ಕೆ.ಜಿ ಅಕ್ಕಿಯೊಂದಿಗೆ ಎಣ್ಣೆ, ಬೇಳೆ ಕಾಳು, ತರಕಾರಿ ಒಳಗೊಂಡ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ.
ಕಾಜೂರು ಜಮಾಅತ್ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹಿಂ ಇವರ ಸಹಯೋಗದೊಂದಿಗೆ, ಹೈ ಟೆಕ್ ಫ್ರೆಂಡ್ಸ್ ಮುಖಾಂತರ ಸದ್ದಿಲ್ಲದೆ ಈ ಸೇವಾ ಕಾರ್ಯ ಮಾಡಲಾಗಿದೆ.