Posts

ಮುಂಡಾಜೆ ಅಬ್ದುಲ್ ರಶೀದ್ ಅವರ ಮನೆಗೆ ಸಿಡಿಲು ಬಡಿದು ಭಾರೀ ನಷ್ಟ



ಬೆಳ್ತಂಗಡಿ; ಸೋಮವಾರ ಸಂಜೆ ವೇಳೆ ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಎದುರಿನ‌ ನಿವಾಸಿ ಅಬ್ದುಲ್ ರಶೀದ್ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಭಾರೀ ಹಾನಿಯಾಗಿದೆ.

ವಿದ್ಯುತ್ ಮೀಟರ್, ವಯರಿಂಗ್, ಸ್ವಿಚ್ ಬೋರ್ಡ್ ಸಿಡಿಲಾಘಾತಕ್ಕೆ ಕಿತ್ತು ಬಂದಿದೆ. ವಯರಿಂಗ್, ಇನ್ವರ್ಟರ್, ಟಿ.ವಿ, ಫ್ರಿಡ್ಜ್ ಎಲ್ಲದಕ್ಕೂ ಹಾನಿಯಾಗಿದ್ದು, ಬಲ್ಬುಗಳು ಮತ್ತು ಉಪಕರಣಗಳು ಸಿಡಿದು ಪುಡಿ ಪುಡಿಯಾಗಿದೆ. ಘಟನೆಯ ವೇಳೆ ಮನೆಯಲ್ಲಿ ಅಬ್ದುಲ್ ರಶೀದ್ ಅವರ ತಂದೆ, ತಾಯಿ, ಅಕ್ಕ, ಬಾವ ಮತ್ತು ಅಕ್ಕನ ಸಣ್ಣ ಮಗು ಇವರೆಲ್ಲ ಇದ್ದರಾದರೂ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. 




ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಸುತ್ತಿನಲ್ಲಿ ಇಲ್ಲಿಗೆ ಸಿಡಿಲು ಬಡಿದಿದೆ. ಈ ವೇಳೆ ಬೆಂಕಿಯ ಉಂಡೆಯಂತೆ ವಿದ್ಯುತ್ ಪ್ರವಹಿಸಿ ಬಂದಿರುವುದು ಅವರಿಗೆ ಕಂಡಿದೆ ಎಂದು ಮನೆಯವರು ತಿಳಿಸಿದ್ದಾರೆ.‌

ಘಟನೆ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್ ಗೆ ಮತ್ತು ಮೆಸ್ಕಾಂ ಇಲಾಖೆಗೆ ಮಾಹಿತಿ‌ ನೀಡಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official