Posts

ಮಂಗಳೂರು ಜನಪ್ರಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮೊಣಕಾಲು, ಕೀಲು ಶಸ್ತ್ರಚಿಕಿತ್ಸಾ ಫ್ಯಾಕೇಜ್ ಘೋಷಣೆ :: 60 ದಿನದಲ್ಲಿ 100 ಮೂಳೆ ಶಸ್ತ್ರಚಿಕಿತ್ಸೆಯ ಆರಂಭಿಕ ದಾಖಲೆ

1 min read


ಮಂಗಳೂರು : ಇಲ್ಲಿನ ಪಡೀಲ್ ಜನಪ್ರಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮೊಣಕಾಲು, ಕೀಲು ಮತ್ತು ಗಂಟು ಜೋಡಣಾ ಫ್ಯಾಕೇಜ್ ಅನಾವರಣ ಹಾಗೂ ಕೇವಲ 60 ದಿನಗಳಲ್ಲಿ 100 ಯಶಸ್ವಿ ಮೂಳೆ ಶಸ್ರ್ತ ಚಿಕಿತ್ಸೆಯ ಸಂಭ್ರಮ ಆಚರಿಸಲಾಯಿತು.

ಫ್ಯಾಕೇಜ್ ಅನಾವರಣಗೊಳಿಸಿ ಮಾತನಾಡಿದ ಹಿರಿಯ ಎಲುಬು ಕೀಲು ತಜ್ಞ ಡಾ. ಎಂ.ಶಾಂತರಾಮ ಶೆಟ್ಟಿ, ವೈದ್ಯರು ರೋಗಿಗಳ ಮನಸ್ಸು ಗೆಲ್ಲಬೇಕು, ಆಗ ಆಸ್ಪತ್ರೆಗಳಿಗೆ ಉತ್ತಮ ಹೆಸರು ಹಾಗೂ ಸಮಾಜದಲ್ಲಿ 


ಗೌರವ ಹೆಚ್ಚಾಗಲಿದೆ. ಆಧುನಿಕ ಜಗತ್ತಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳ ಬಳಕೆಯಿಂದ ರೋಗಿಯು ಶಸ್ತ್ರಚಿಕಿತ್ಸೆ ಬಳಿಕ ಶೀಘ್ರವಾಗಿ ಚೇತರಿಕೆ ಸಾಧ್ಯ.  ಅಪಘಾತ ಸಂಭವಿಸಿದ ರೋಗಿಗಳಿಗೆ ಸೂಕ್ತ ಮತ್ತು ತಕ್ಷಣದ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಕ್ಪ್ ಬೋರ್ಡ್ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್, ಈ ಆಸ್ಪತ್ರೆ ಇನ್ನೂ ಹೆಚ್ಚಿನ ಜನರ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಅತಿಥಿಯಾಗಿ  ಮಾತನಾಡಿದ ಮಹಮ್ಮದ್ ಅಲಿ ಕಮ್ಮರಡಿ, ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರು ಹೃದಯಶೀಲರು ಅವರ ಸೇವೆ ಇನ್ನೂ ಹೆಚ್ಚಾಗಿ ಈ ಭಾಗದ ಜನರಿಗೆ ದೊರೆಯಲಿ ಎಂದು ಆಶಿಸಿದರು.   

ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿಕೆ ಮಾತನಾಡಿ, ನಮ್ಮ ಊರಾದ ಮಂಗಳೂರಿನಲ್ಲಿ ಒಂದು ಅತ್ಯುತ್ತಮ ದರ್ಜೆಯ ಜನ ಸ್ನೇಹಿ ಆಸ್ಪತ್ರೆ ಮಾಡುವ ಗುರಿಯಿಂದ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಿದ್ದೇವೆ. ಬಡವ- ಶ್ರೀಮಂತ ಎನ್ನುವ ಬೇಧ ಭಾವ ವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚಿಕಿತ್ಸೆ ನೀಡಲು ನಮ್ಮ ಸಂಸ್ಥೆ ಯಾವಾಗಲೂ ಬದ್ಧವಾಗಿದೆ ಎಂದರು.   

ಕಾರ್ಯಕ್ರಮದಲ್ಲಿ ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ. ನುಮನ್ ಮಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿ ಮೂಳೆ ಶಸ್ತ್ರಚಿಕಿತ್ಸೆ ನಡೆಸಿಕೊಂಡ ಎಲ್ಲರೂ  ಗುಣಮುಖರಾಗಿ ಸಂತೋಷದಿಂದ ಮನೆಗೆ ಮರಳಿದ್ದಾರೆ ಎಂದರು.

ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ಹಾಗೂ ನಿರ್ದೇಶಕ ಡಾ. ಕಿರಶ್ ಪರ್ತಿಪ್ಪಾಡಿ, ಕೀಲು ಜೋಡಣೆ ಶಸ್ತ್ರಚಿಕಿತ್ಸೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ವಯಸ್ಕರಿಗೂ ಗುಣಮಟ್ಟದ ಜೀವನ ಅತ್ಯಗತ್ಯ, ಆದ್ದರಿಂದ ಅವರು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಮೂಳೆ ಶಸ್ತ್ರಚಿಕಿತ್ಸ ತಜ್ಞ ಡಾ. ತ್ರಿವಿಕ್ರಮ ಭಟ್,  ನಿರ್ದೇಶಕ ಡಾ.ಶಾರೂಕು ಅಬ್ಧುಲ್ಲಾ, ಡಾ. ಶಫಾಕ್ ಮೊಹಮ್ಮದ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment