Posts

ಜಿಲ್ಲೆಯ ನಿರ್ದೇಶನಗಳ ಅನುಷ್ಠಾನದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ;ವಸಂತ ಶೆಟ್ಟಿ

1 min read


ಬೆಳ್ತಂಗಡಿ ಲಯನ್ಸ್ ಕ್ಲಬ್ ನಲ್ಲಿ ಝೋನ್ ಸೋಷಿಯಲ್

ಬೆಳ್ತಂಗಡಿ; ಅಂತಾರಾಷ್ಟ್ರೀಯ  ಲಯನ್ಸ್ ಸಂಸ್ಥೆಯ ಜಿಲ್ಲಾ ಘಟಕವು ಕಾಲಕಾಲಕ್ಕೆ ನೀಡುವ ಎಲ್ಲಾ ನಿರ್ದೇಶನಗಳನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ, ಸದಸ್ಯತ್ವ ನಿಧಿ ಸಂಗ್ರಹ ಸಹಿತ ಎಲ್ಲಾ  ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದು ಲಯನ್ಸ್ ವಲಯಾಧ್ಯಕ್ಷ, ಶ್ರದ್ಧಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಹೇಳಿದರು. 

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಝೋನ್ ಸೋಷಿಯಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಹೇಮಂತ ರಾವ್ ಯರ್ಡೂರು ಅಧ್ಯಕ್ಷತೆ ವಹಿಸಿದ್ದು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿದ್ದ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್ , ಆಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಮನ್ ಡಿಸಿಲ್ವಾ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ಪಚ್ಚೇರಿ, ಲಯನ್ಸ್ ಜಿಲ್ಲಾ ಕೋರ್ಡಿನೇಟರ್ ನಿತ್ಯಾನಂದ ನಾವರ, ಬೆಳ್ತಂಗಡಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ಇವರು ಉಪಸ್ಥಿತರಿದ್ದರು. 

ವಸಂತ ಶೆಟ್ಟಿ ಅವರನ್ನು ವಲಯ ಸಮ್ಮೇಳನದ ಸಂಪ್ರದಾಯದಂತೆ ಗೌರವಿಸಲಾಯಿತು.

ಸ್ಥಾಪಕ ಸದಸ್ಯರಾದ ಎಂ.ಜಿ ಶೆಟ್ಟಿ ಮತ್ತು ವಿ.ಆರ್ ನಾಯ್ಕ್, ಹಿರಿಯ ಸದಸ್ಯರಾದ ರಘುರಾಮ ಗಾಂಭೀರ, ರಾಮಕೃಷ್ಣ ಗೌಡ ಸಹಿತ ಸದಸ್ಯರುಗಳು, ವಲಯದ ಇತರ ಕ್ಲಬ್ ಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಬೆಳ್ತಂಗಡಿ ಕ್ಲಬ್‌ನ ಕಾರ್ಯದರ್ಶಿ ಅನಂತಕೃಷ್ಣ ವರದಿ ಮಂಡಿಸಿದರು.

ಅಶೋಕ್ ಕುಮಾರ್ ಬಿ‌.ಪಿ ಪ್ರಾರ್ಥನೆ ಹಾಡಿದರು. 

ರಘುರಾಮ ಶೆಟ್ಟಿ ಉಜಿರೆ ಧ್ವಜವಂದನೆ ನಡೆಸಿಕೊಟ್ಟರು. ಅಶ್ರಫ್ ಆಲಿಕುಂಞಿ ಮುಂಡಾಜೆ ನೀತಿಸಂಹಿತೆ ವಾಚಿಸಿದರು. ಸುಭಾಷಿಣಿ ಅವರು ವಲಯಾಧ್ಯಕ್ಷ ವಸಂತ ಶೆಟ್ಟಿ ಅವರನ್ನು ಸಭೆಗೆ ಪರಿಚಯಿಸಿದರು. ಕೋಶಾಧಿಕಾರಿ ದತ್ತಾತ್ರೇಯ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment