ಬೆಳ್ತಂಗಡಿ; ತಾಯಿಯ ಜೊತೆ ಎಂದೂ ಮನೆಯ ತೋಟದ ಕೆರೆಯ ಬಳಿಗೆ ಹೋಗುತ್ತಿದ್ದ ಒಂದುವರ್ಷ ಒಂಭತ್ತು ತಿಂಗಳ ಗಂಡು ಮಗುವೊಂದು ತಾಯಿಗೆ ಅರಿವಿಲ್ಲದೆ ಕೆರೆಯ ಬಳಿ ಹೋಗಿದ್ದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿ ಎಂಬಲ್ಲಿಂದ ವರದಿಯಾಗಿದೆ.
ಮೃತ ಬಾಲಕನನ್ನು ಇಲ್ಲಿನ ನಿವಾಸಿ ಜಗದೀಶ ಎಂಬವರ ಪುತ್ರ ಪ್ರಣೀತ್ ಎಂಬವರೆಂದು ಗುರುತಿಸಲಾಗಿದೆ.
ಬಾಲಕನು ಯಾವತ್ತೂ ತನ್ನ ತಾಯಿಯ ಜೊತೆ ಕೆರೆಯ ಬಳಿ ತೆರಳುತ್ತಿದ್ದನು. ಇಂದು ತಂದೆ ತಾಯಿ ಇಬ್ಬರೂ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಅವರ ಅರಿವಿಗೆ ಬಾರದೆ ಕೆರೆಯ ಬಳಿ ತೆರಳಿದ್ದನು.
ಮಗು ಕಾಣದಾದಾಗ ಹುಡುಕುತ್ತಾ ತಂದೆ ವೀರಪ್ಪ ಅವರು ಕೆರೆಯಲ್ಲಿ ಹುಡುಕಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.