ಬೆಳ್ತಂಗಡಿ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಮೂಲಕ ರಚಿಸಲ್ಪಟ್ಟ ಕಾರ್ಯಪಡೆ ತಂಡದ ನೇತೃತ್ವದಲ್ಲಿ ಸೈಂಟ್ ಜೋಸೆಫ್ ಚರ್ಚ್ ಕುತ್ಲೂರುನಲ್ಲಿ ಶನಿವಾರ ನೆರವೇರಿಸಲಾಯಿತು.
ಕೋವಿಡ್ ಬಾಧಿತರಾಗಿದ್ದ ಕುತ್ಲೂರು ಚರ್ಚ್ ವ್ಯಾಪ್ತಿಯ ಡೈಸಿ (51ವ.) ಇವರು ಮೆ. 29 ರಂದು ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು, ಅವರ ಅಂತ್ಯಸಂಸ್ಕಾರ ವಿಧಿಗಳನ್ನು ಟಾಸ್ಕ್ ಫೋರ್ಸ್ ತಂಡದ ಸಂಯೋಜಕ ವಂ.ಫಾ. ಬಿನೋಯಿ ಎ.ಜೆ ಹಾಗೂ ಸಹ ಸಂಯೋಜಕ ವಂ.ಫಾ.ಶಾಜಿ ಮಾಥ್ಯು ಗಂಡಿಬಾಗಿಲು ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ವಂ.ಫಾ. ದಿಲೀಪ್, ವಂ.ಫಾ. ಸಿರಿಲ್ ಇವರ ಸಹಕಾರದೊಂದಿಗೆ ಪ್ರಾರ್ಥನಾ ವಿಧಿಗಳು ನಡೆದವು.
ದೇವಗಿರಿ ಟಾಸ್ಕ್ ಫೋರ್ಸ್ ತಂಡದ ಸದಸ್ಯ ಬಿಜು ಪಿ, ಸಂತೋಷ್ ಪಿ, ಜೋಬಿ ಎಂ, ತೋಟತ್ತಾಡಿ ಟಾಸ್ಕ್ ಫೋರ್ಸ್ ತಂಡದ ಸದಸ್ಯರಾದ ಅಮಿತ್, ಸಾನಿ, ಕುತ್ಲೂರು ಟಾಸ್ಕ್ ಫೋರ್ಸ್ ತಂಡದ ಸದಸ್ಯರಾದ ಶಾಜಿ ಪಯ್ಯಪ್ಪಿಲಿ, ದೇವಸ್ಯಚ್ಚನ್ ತುಂಡತ್ತಿಲ್ ಹಾಗೂ ಚರ್ಚ್ ನ ಇತರ ಸದಸ್ಯರು ಸಹಕರಿಸಿದರು. ಮೃತರು ಪತಿ ಹಾಗೂ 2 ಮಕ್ಕಳನ್ನು ಅಗಲಿದ್ದಾರೆ.