ಬೆಳ್ತಂಗಡಿ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುವ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಇನ್ನೂರಷ್ಟು ಮಂದಿಗೆ ಕೋವಿಡ್ ದೃಢಪಟ್ಟಿದ್ದು ಎಲ್ಲರನ್ನೂ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್‌ಗೆ ರವಿವಾರ ಸ್ಥಳಾಂತರಿಸಲಾಯಿತು.
ಆಶ್ರಮದಲ್ಲಿ ಒಟ್ಟು 270 ಮಂದಿಯಿದ್ದು, ಅವರ ಪೈಕಿ ಎಲ್ಲರ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಮೇ 30 ಕ್ಕೆ ಇನ್ನೂರಷ್ಟು ಮಂದಿಗೆ ಕೋವಿಡ್ ದೃಢಪಟ್ಟಿತ್ತು.
ಈಗಾಗಲೆ ಓರ್ವ ಆಶ್ರಮವಾಸಿ ಕೋವಿಡ್‌ನಿಂದ ಮೃತರಾಗಿದ್ದು, ಉಳಿದವರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಇಲಾಖೆಗೆ ಸೂಚಿಸಿ ಈ ಸ್ಥಳಾಂತರ ಪ್ರಕ್ರಿಯೆ ನಡೆಯಿತು.
ಧರ್ಮಸ್ಥಳದಲ್ಲಿ 600 ಬೆಡ್ ಅವಕಾಶವಿರುವ ರಜತಾದ್ರಿ ವಸತಿಗೃಹವನ್ನು ಈಗಾಗಲೇ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೋವಿಡ್ ಸೆಂಟರ್ ಗಾಗಿ ಆಡಳಿತಕ್ಕೆ ಅನುಮತಿಸಿದ್ದು ಅಲ್ಲಿಗೆ ಎಲ್ಲರನ್ನೂ ವರ್ಗಾಯಿಸಲಾಯಿತು.