Posts

ವಾರದಲ್ಲಿ ಐದು ಮಂದಿಯನ್ನು ಆಸ್ಪತ್ರೆಗೆ ತಳ್ಳಿದ ಬೆಳ್ತಂಗಡಿ ಹಳೆಕೋಟೆ ರಸ್ತೆಮೇಲಿನ ಮರಣಗುಂಡಿ

1 min read

ಬೆಳ್ತಂಗಡಿ; ಹೇಳಿ ಕೇಳಿ ಇದು ರಾಷ್ಟ್ರೀಯ ಹೆದ್ದಾರಿ.ಬೆಳ್ತಂಗಡಿ ಹಳೆಕೋಟೆ ಎಂಬಲ್ಲಿರುವ ಈ ರಸ್ತೆಯ ಅಸಂಪ್ರದಾಯಿಕ ಏರುತಗ್ಗು, ಮತ್ತು ಇರುವ ಗುಂಡಿ ಸಣ್ಣದಾದರೂ ಕಳೆದ ಒಂದು ವಾರದಲ್ಲಿ ಐವರು ಬೈಕ್- ಸ್ಕೂಟರ್ ಸವಾರರನ್ನು ಆಸ್ಪತ್ರೆ ಸೇರುವಂತೆ ಮಾಡಿದೆ.ವಾರದ ಅಂತರದಲ್ಲಿ ಇಲ್ಲಿಅಪಘಾತಕ್ಕೊಳಗಾದವರ ಪೈಕಿ ಇಬ್ಬರು ಗಂಭೀರ ಸ್ವರೂಪದ ಗಾಯಕ್ಕೊಳಗಾಗಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ.




ಸಣ್ಣ ಮಟ್ಟಿಗೆ ವ್ಯಾಪಾರಿ ಕೇಂದ್ರವಾಗಿ ಬೆಳೆದಿರುವ ಹಳೆಕೋಟೆ ವಿನಾಯಕ ರೈಸ್ ಮಿಲ್  ಪಕ್ಕದ ರಸ್ತೆಯ ಒಂದೆಡೆ ಸತ್ಯಸಾಯಿ ಮಂದಿರ, ಇಕ್ಕಡೆಯಲ್ಲಿ ದ್ವಿಚಕ್ರ ವಾಹನ ಶೋರೂಮ್, ಫ್ಯಾಮಿಲಿ ಮಾರ್ಟ್, ಚಪ್ಪಲಿ ಮತ್ತು ವಸ್ರ್ತದ ಅಂಗಡಿ, ದಿನಸಿ ಅಂಗಡಿ, ಹೊಟೇಲು, ಬಾರ್ ಏಂಡ್ ರೆಸ್ಟೋರೆಂಟ್ ತಿರುವ ಪ್ರದೇಶ ಹೀಗೆ ಎಲ್ಲ ದೃಷ್ಟಿಯಿಂದ ಜನಸಂಚಾರ ಅಧಿಕ ಇರುವ ಜಾಗವಾಗಿ ಹೊರಹೊಮ್ಮಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದೇಕೋ ಡಾಂಬರು ಕಿತ್ತುಹೋಗಿದ್ದು ಅಸಂಪ್ರದಾಯಿಕ ಕೃತಕ ಹಂಪ್‌ಗಳ ಸಾಲು ನಿರ್ಮಾಣವಾಗಿದೆ. ‌ಒಂದೆಡೆ ಡಾಂಬರು ಕಿತ್ತು ಬಂದಿದ್ದು, ಇರುವ ಹೊಂಡ ಸಣ್ಣದಾದರೂ ಟುವೀಲರ್ ಗಳಿಗೆ ಅಪಾಯ ಕಟ್ಟಿಟ್ಟುಕೊಂಡಿದೆ.

ಸಾಮಾನ್ಯ ವೇಗದಿಂದ ಬರುವ ದ್ವಿ ಚಕ್ರ ವಾಹನಗಳು ಇಲ್ಲಿ ತಲುಪುತ್ತಲೇ ಹಂಪ್ ನಂತಾಗಿರುವ ರಸ್ತೆಗೆ ಸಿಲುಕಿ ಒಮ್ಮಗೇ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಅಲ್ಲದೆ ಅಟೋ ಮತ್ತು ಇತರ ವಾಹನಗಳು ಇಲ್ಲಿ ಒಮ್ಮೆಗೇ‌ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುವ ಬೈಕ್- ಸ್ಕೂಟರ್ ಗಳು ಅಪಘಾತಕ್ಕೊಳಗಾಗುತ್ತಿದೆ.

ವಾರದ ಅಂತರದಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ಐವರು ಈ ರಸ್ತೆಯಲ್ಲಿ ಬಿದ್ದು ತೀವ್ರ ತರದ ಗಾಯಕ್ಕೊಳಗಾಗಿದ್ದಾರೆ. ಕಳೆದ ಶನಿವಾರ ಹಿರಿಯರೊಬ್ಬರ ಸ್ಕೂಟರ್ ಅಪಘಾತಕ್ಕೊಳಗಾಗಿ ಅವರು ಗಾಯಗೊಂಡರೆ, ರವಿವಾರ ಮಹಿಳೆಯೊಬ್ಬರು ಬಿದ್ದು ಗಾಯವಾಗಿದೆ. ಸೋಮವಾರದಂದು ಇಬ್ಬರು ಎಳೆಯ ಮಕ್ಕಳನ್ನೂ ಕುಳ್ಳಿರಿಸಿ ಬರುತ್ತಿದ್ದ ಗೃಹಿಣಿಯೊಬ್ಬರ ಸ್ಕೂಟರ್ ಇಲ್ಲಿ ಪಲ್ಟಿಹೊಡೆದು ಮೂವರಿಗೂ ಗಾಯವಾಗಿತ್ತು. ಹತ್ತಿರದ ವ್ಯಾಪಾರ ಮಳಿಗೆಯವರು ತಕ್ಷಣ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ವಾರದ ಅಂತರದಲ್ಲಿ ಇಲ್ಲಿ ಬಿದ್ದಿರುವವರಲ್ಲಿ ಒಂದಿಬ್ಬರು ಗಂಭೀರ ಗಾಯಕ್ಕೊಳಗಾಗಿದ್ದಾರೆ ಎಂದು ಸ್ಥಳೀಯ ಫೂಟ್‌ವೇರ್ ಮಾಲಕ ಅಶ್ರಫ್ ತಿಳಿಸಿದ್ದಾರೆ.

ಒಂದು ಬಾರಿ ನಾವೇ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಿದ್ದೇವೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಇದ್ದ ಸಂದರ್ಭದಲ್ಲಿ ಅದನ್ನು ಕಿತ್ತು ಡಾಂಬರಿನಿಂದ ಪೇಚ್ ವರ್ಕ್ ಮಾಡಿದ್ದರು.‌ ಅದು ಎರಡೇ ದಿನದಲ್ಲಿ ಮತ್ತೆ ಕಿತ್ತು ಹೋಗಿದೆ. ಇದೀಗ ವಾಹನ ಚಾಲಕರಿಗೆ ಒಮ್ಮೆಲೇ ಗೊತ್ತಾಗದೆ ಇಲ್ಲಿ ಅಪಘಾತಗಳು ಸಂಭವಿಸುತ್ತಿದೆ‌.‌ ಅದರಲ್ಲೂ ಸ್ಕೂಟರ್ ಮತ್ತು ಬೈಕ್ ಗಳ ಸವಾರರಿಗೆ ಇದು ಮರಣಗುಂಡಿಯಾಗಿ ಮಾರ್ಪಟ್ಟಿದೆ ಎಂದರೂ ತಪ್ಪಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶೀಘ್ರ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸದಿದ್ದರೆ ಇಲ್ಲೇನಾದರೂ ಪ್ರಾಣ ಹಾನಿಯಾದರೆ ಅವರೇ ಹೊಣೆಗಾರರಾಗುತ್ತಾರೆ ಎಂದು ಅಕ್ಕಪಕ್ಕದ ವ್ಯಾವಾರಸ್ತರು ಅಭಿಪ್ರಾಯಪಟ್ಟಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment