Posts

ರಾಜ್ಯಮಟ್ಟದ ಕರಾಟೆ; 21 ವಯೋಮಾನ ವಿಭಾಗದಲ್ಲಿ ಬೆಳ್ತಂಗಡಿ ಸಿಂಚನಾ ಎಂ.ಡಿ ಪ್ರಥಮ

0 min read


ಬೆಳ್ತಂಗಡಿ; ಸೆಪ್ಟೆಂಬರ್ 25 ಮತ್ತು 26 ರಂದು ಗದಗ ಜಿಲ್ಲಾ ಇಂಡೋರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಅಂಡರ್ 21 ವಿಭಾಗದಲ್ಲಿ ಬೆಳ್ತಂಗಡಿ ಯಮಟೋ ಶೊಟೋಕಾನ್ ಕರಾಟೆ ಇದರ ಸದಸ್ಯೆ ಸಿಂಚನಾ ಎಂ.ಡಿ. ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 


ಸಿಂಚನಾ ಅವರು ತನ್ನ ಕರಾಟೆ ಶಿಕ್ಷಣವನ್ನುಮುಖ್ಯ ಗುರುಗಳಾದ ಶಾಜು ಮುಲಾವನ, ಬೆಳ್ತಂಗಡಿ ಶಾಖೆಯ ಅಶೋಕ್ ಆಚಾರ್ಯ ಮತ್ತು ಮಿಥುನ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. 

ಇವರು ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ಆಗಿರುವ ದುರ್ಗಾದಾಸ್ ಮತ್ತು ರೇವತಿ ದಂಪತಿಯ ಪುತ್ರಿಯಾಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment