ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 23 ನೇ ವರ್ಷದ ಭಜನಾ ತರಬೇತಿ ಕಮಗಮಟದ ಸಮಾರೋಪ ಅಮೃತವರ್ಷಿಣಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಮತ್ತು ಶ್ರೀ ಧಾಮ ಮಾಣಿಲದ ಯತಿವರ್ಯರಾದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ವಿಧಾನ ಪರಿಷತ್ತಿಗೆ ಶಾಸಕ ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಡಿ ಹರ್ಷೇಂದ್ರ ಕುಮಾರ್, ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪಾತಾಳ ವೆಂಕಟರಮಣ ಭಟ್ ಕಲಾ ಮಂಗಳ ಪ್ರಶಸ್ತಿ ಪ್ರದಾನ ಮಾಡುವರೇ ವೆಂಕಟರಮಣ ಭಟ್ ವೇದಿಕೆಯಲ್ಲಿದ್ದರು. 30 ಮಂದಿ ಯಕ್ಷ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಂತಿವನ ಟ್ರಸ್ಟ್ ನಿರ್ದೇಶಕ ಡಾ. ಐ ಶಶಿಕಾಂತ್ ಓಂಕಾರ ಮಂತ್ರ ಪಠಿಸಿದರು. ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು.
ಕಾರ್ಯದರ್ಶಿ ಮಮತಾ ರಾವ್ ವರದಿ ಮಂಡಿಸಿದರು.
ಭಜನಾ ತರಬೇತಿ ಕಮ್ಮಟದ ಸಮಾರೋಪದ ಅಂಗವಾಗಿ ರಾಜೇಶ್ ಪಡಿಯಾರ್ ಅವರಿಂದ ಭಜನೆ ಪಾರಂಭ ಮಾಡೋಣ ಹಾಡು ಅರಂಭಗೊಂಡರೆ, ರಮೇಶ್ ಕಲ್ಮಾಡಿ ಮತ್ತು ಶಂಕರ್‌ದಾಸ್ ಮತ್ತು ತಂಡದವರ ನಿರ್ದೇಶನದಿಂದ ನೃತ್ಯ ಭಜನಾ ಪ್ರಾತ್ಯಕ್ಷಿಕೆ ನಡೆಯಿತು.
ಕು.ಚೈತ್ರಾ ಧರ್ಮಸ್ಥಳ ಅವರ ನಿರ್ದೇಶನದಲ್ಲಿ ಮಹಿಳಾ ಶಿಬಿರಾರ್ಥಿಗಳಿಂದ ಭಜನೆ ಪ್ರದರ್ಶನ ನಡೆಯಿತು. ಭಜನಾ ಶಿಬಿರಾರ್ಥಿ ರಾಕೇಶ್ ಆಚಾರ್ಯ ಕಡಬ ಅನಿಸಿಕೆ ವ್ಯಕ್ತಪಡಿಸಿದರು. ಜಯರಾಮ ನೆಲ್ಲಿತ್ತಾಯ ಧನ್ಯವಾದ ಸಮರ್ಪಿಸಿದರು. ಮನೋರಮಾ ತೋಲ್ಪಡಿತ್ತಾಯ ಅವರಿಂದ ಶಂಕರಾಯ ಶಂಕರಾಯ ಮಂಗಳಗೀತೆ ಭಜನೆ ಮೊಳಗಿತು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.