ಬೆಳ್ತಂಗಡಿ: ಸ್ವಚ್ಛತೆ ಒಂದು ದಿನದ ಕೆಲಸವಲ್ಲ.ಅದು ನಿರಂತರ ಪ್ರಕ್ರೀಯೆ. ಅದು ನಮ್ಮ ಆಧ್ಯತೆಯೂ ಆಗಲಿ ಎಂದು ಬೆಳ್ತಂಗಡಿ ಜೆಎಮ್‌ಎಫ್‌ಸಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ನಾಗೇಶ ಮೂರ್ತಿ ಹೇಳಿದರು.
ಪಟ್ಟಣ ಪಂಚಾಯತ್ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ನೇತೃತ್ವದಲ್ಲಿ ವಕೀಲರ ಸಂಘ ಬೆಳ್ತಂಗಡಿ ವರ್ತಕರ ಸಂಘ ಬೆಳ್ತಂಗಡಿ ರೋಟರಿ ಕ್ಲಬ್, ಜೇಸಿಐ ಬೆಳ್ತಂಗಡಿ ಮಂಜುಶ್ರೀ, ಮಂಜುಶ್ರೀ ಸೀನಿಯರ್ ಚೇಂಬರ್, ಸರಕಾರಿಬಪ.ಪೂ ಕಾಲೇಜು ಬೆಳ್ತಂಗಡಿ, ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಶ್ರೀ ಗುರುದೇವ ಪ.ಪೂ ಕಾಲೇಜು ಬೆಳ್ತಂಗಡಿ, ಇವರ ಸಹಯೋಗದಲ್ಲಿ
ಬೆಳ್ತಂಗಡಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಥಾದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಬೆಳ್ತಂಗಡಿ ಅಂಬೇಡ್ಕರ್ ಭವನ ಬಳಿ ಉದ್ಘಾಟನೆಗೊಂಡ ಜಾಥಾ ಬಂಟರ ಭವನದ ಬಳಿ ವರೆಗೆ ಸಾಗಿತು.
ಸಮಾರಂಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್, ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ಯರ್ಡೂರು, ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕ್ಕರ್, ಸೀನಿಯರ್ ಚೇಂಬರ್ ಅಧ್ಯಕ್ಷ ಲೇನ್ಸಿಎ ಪಿರೇರಾ, ಪ್ರಮುಖರಾದ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ವಸಂತ ಶೆಟ್ಟಿ, ವಸಂತ ಸುವರ್ಣ, ಸುನಿಲ್ ಶೆಣೈ,ಮಹಾವೀರ ಆರಿಗಾ, ದೇವಿಪ್ರಸಾದ್, ಮಂಜುನಾಥ ರೈ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸುಶೀಲಾ ಹೆಗ್ಡೆ, ದತ್ತಾತ್ರೇಯ ಗೊಲ್ಲ, ಸ್ವರೂಪ್ ಶೇಖರ್, ಪ್ರಮೋದ್ ಆರತ ನಾಯ್ಕ್, ಗಣೇಶ್ ಸುವರ್ಣ, ಜನಾರ್ದನ, ಕರುಣಾಕರ, ಮೆಟಿಲ್ಡಾ, ಲಕ್ಷ್ಮಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಲಯನ್ಸ್ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಸ್ವಾಗತಿಸಿದರು.
ಉದ್ಘಾಟನೆ ಬಳಿಕ ಬೆಳ್ತಂಗಡಿ ಚರ್ಚ್ ಕೂಡುರಸ್ತೆಯ ಬಳಿ ಜಾಥಾದ ಸಮಾರೋಪ ನಡೆದು,
ಸ್ವಚ್ಚಥಾ ಕಾರ್ಯ ಕೈಗೊಳ್ಳಲಾಯಿತು.