Posts

ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದ ಬಳಿ "ಸಿರಿ" ಸಂಸ್ಥೆಯ ಶಾಶ್ವತ ಮಾರಾಟ ಮಳಿಗೆ ಉದ್ಘಾಟನೆ

1 min read


ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತ ಮಹೋತ್ಸವ ಸಭಾಂಗಣದ ಬಳಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರಾಟ ಮಳಿಗೆ ಇಂದು (ನ.19) ಉದ್ಘಾಟನೆ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು,  ರಾಜ್ಯಸಭೆಯ ಸದಸ್ಯರೂ ಆಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಮತ್ತು ಹೆಗ್ಗಡೆಯವರವ ಮೊಮ್ಮಗಳು ಮಾನ್ಯಾ ದೀಪ ಪ್ರಜ್ವಲಿಸಿ ಉದ್ಘಾಟನೆ ನೆರವೇರಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಏನ್ ಜನಾರ್ಧನ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ, ಸಿರಿ ಸಂಸ್ಥೆಯ ನಿರ್ದೇಶಕ ಪ್ರಸನ್ನ, ಮಾರುಕಟ್ಟೆ ವಿಭಾಗದ ಅಧಿಕಾರಿ ವಿನ್ಸೆಂಟ್  ಮೊದಲಾದವರು ಉಪಸ್ಥಿತರಿದ್ದರು.

ಸಿರಿ ಸಂಸ್ಥೆ ಈಗಾಗಲೇ ಮಂಗಳೂರಿನಲ್ಲಿ 2, ಧರ್ಮಸ್ಥಳ ದಲ್ಲಿ 2, ಹಾಸನದಲ್ಲಿ 1, ಬೆಂಗಳೂರು 1, ಧಾರವಾಡ 1 ಮತ್ತು  ಉಡುಪಿ ಪರೀಕದಲ್ಲಿ 1 ಶಾಶ್ವತ ಮಾರಾಟ ಮಳಿಗೆ ಕಾರ್ಯಾಚರಿಸುತ್ತಿದ್ದು, ಧರ್ಮಸ್ಥಳದ ಮಳಿಗೆ 14 ನೇ ಮಳಿಗೆಯಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment