Posts

ಸಯ್ಯದ್ ಕಾಜೂರ್ ತಂಙಳ್ ‌ರನ್ನು ಭೇಟಿಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ

0 min read

ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದತೆಯ ಸಮನ್ವಯ ಕ್ಷೇತ್ರ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು  ದರ್ಗಾ ಶರೀಫ್  ಕಾಜೂರು ಇಲ್ಲಿಗೆ ಶಾಸಕ ಹರೀಶ್ ಪೂಂಜ ಶುಕ್ರವಾರ ಭೇಟಿ ಮಾಡಿ,  ಕಾಜೂರ್  ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯದ್  ಕಾಜೂರು ತಂಙಳ್ ಅವರ ಆಶೀರ್ವಾದ ಪಡೆದರು.

ಈ ‌ಸಂದರ್ಭ ಕಾಜೂರು ದರ್ಗಾ ಶರೀಫ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ಶಾಸಕರನ್ನಿ ಶಾಲು ಹೊದಿಸಿ ಫಲ ಫುಷ್ಪ ನೀಡಿ ಸನ್ಮಾನಿಸಿದರು.

ಶಾಸಕರೊಂದಿಗೆ ನಾರಾಯಣ ಪಾಟಾಳಿ ಕಾಜೂರ್ , ಆನಂದ ಮೈರ್ನೋಡಿ, ವಿನಯ ಸೇನರಬೊಟ್ಟು, ದಿನೇಶ ದಿಡುಪೆ ಮೊದಲಾದವರು ಜೊತೆಗಿದ್ದರು.


ಈ ಸಮಯದಲ್ಲಿ ಕಾಜೂರು ಸಮಿತಿ  ಪ್ರಧಾನ ಕಾರ್ಯದರ್ಶಿ ಜೆ.ಹೆಚ್  ಅಬೂಬಕ್ಕರ್ ಸಿದ್ದೀಕ್ ಕಾಜೂರ್ ,  ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಕಾಜೂರು, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಾಜೂರು, ಬದ್ರುದ್ದೀನ್ ಕಾಜೂರು, ಇಸ್ಮಾಯಿಲ್ ಡೆಲ್ಲಿ  ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment