Posts

ಚುನಾವಣಾ ಅಕ್ರ‌ಮ‌ದ ನ್ಯಾಯಕ್ಕಾಗಿ ಕಾನತ್ತೂರಿಗೆ ಸತ್ಯ ಪ್ರಮಾಣಕ್ಕೆ ಬನ್ನಿ; ಮಾಜಿ ಶಾಸಕ ವಸಂತ ಬಂಗೇರ ಆಹ್ವಾನ

2 min read

 



ಅಕ್ರಮ ಆರೋಪಿಸಿ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳಿಂದ‌ ಬೆಳ್ತಂಗಡಿಯಲ್ಲಿ ಪ್ರತಿಭಟನೆ


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಭಾರೀ ಅಕ್ರಮ‌ ನಡೆದಿದೆ. ನೆರೆ ಮತ್ತು ತಾಲೂಕಿನಲ್ಲಿ‌ ನಡೆಯುತ್ತಿರುವ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಪಡೆದು ಅದರಿಂದ ಕೋಟಿ ಕೋಟಿ ಹಣ ಸುರಿದು,‌ ಸೀರೆ ಹಂಚಿ ಚುನಾವಣೆಯಲ್ಲಿ ಗೆಲ್ಲಲಾಗಿದೆ. ಇಲ್ಲಿ ನಡೆದ‌ ಚುನಾವಣೆ ಅಕ್ರಮದಲ್ಲಿ ತಾಲೂಕು ಚುನಾವಣಾಧಿಕಾರಿ‌ ಸೇರಿದಂತೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ಈ‌ ಎಲ್ಲ ವಿಚಾರಗಳನ್ನು‌ ನಾನು ಕಾನತ್ತೂರು‌ ಕ್ಷೇತ್ರದಲ್ಲಿ ಸತ್ಯಪ್ರಮಾಣ‌ ಮಾಡಲಿದ್ದು ಎಲ್ಲರಿಗೂ ಪ್ರಾಯಸ್ಚಿತ್ತಕ್ಕೆ‌ ಜ.20 ರಂದು ಪ್ರಾರ್ಥನೆ ಗೈಯ್ಯಲಿದ್ದೇವೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.


ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ  ಮತ್ತು ಗ್ರಾಮೀಣ ಬ್ಲಾಕ್ ಘಟಕ ಹಾಗೂ ಜಾತ್ಯಾತೀತ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕಮ್ಯುನಿಸ್ಟ್ ನೇತೃತ್ವದ ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಇವರ ಜಂಟಿ‌  ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು‌ ನಡೆದ  ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.


2020ರ ಗ್ರಾ.ಪಂ ಚುನಾವಣೆಯಲ್ಲಿ ಅಕ್ರಮ ನಡೆದಿದೆ.

ಬಳಂಜ, ನಾವೂರು ಗ್ರಾಮದ  ಮತಪೆಟ್ಟಿಗೆಯಲ್ಲಿ ಹೆಚ್ಚುವರಿ ಮತಗಳು ಮತ್ತು ಸಂಬಂಧಪಡದ ಮತಪತ್ರಗಳು ದೊರೆತಿದೆ. ಕೆಲವೆಡೆ ಅಭ್ಯರ್ಥಿಗಳನ್ನು ನಿಲ್ಲದಂತೆ ಮತ್ತು ನಾಮಪತ್ರ ಹಾಕದವರನ್ನು ಬೆದರಿಸಿ ವಾಪಾಸು ಪಡೆಯಲಾಗಿದೆ. ಮತ‌ಸೇರ್ಪಡೆಯಲ್ಲಿ ವ್ಯತ್ಯಾಸ, ವಾರ್ಡ್‌ಗಳ ಅದಲು ಬದಲು ಮಾಡಲಾಗಿದೆ. ಸರಕಾರದ ಅಕ್ರಮ‌-ಸಕ್ರಮ, ಆಶ್ರಯ ಮನೆ‌‌ ಮಂಜೂರಾತಿ, 94 ಸಿ ಯೋಜನೆಯ ದೊರೆಯದಂತೆ ಮಾಡುತ್ತೇವೆ ಎಂಬ ಹೆಸರಿನಲ್ಲಿ ಜನರನ್ನು ಭಯಪಡಿಸಿ ಚುನಾವಣೆ ಗೆಲ್ಲಲಾಗಿದೆ‌.‌ ಇದಕ್ಕೆ ತಹಶಿಲ್ದಾರ್ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್ ಸೇರಿ ಅಧಿಕಾರಿಗಳು ಸಾತ್ ನೀಡಿದ್ದಾರೆ. ಇದೆಲ್ಲದರ ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಚುನಾವಣಾ  ಆಯೋಗಕ್ಕೆ ಅರ್ಜಿ ನೀಡುತ್ತಿದ್ದೇವೆ ಎಂದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, 

ಕಾಂಗ್ರೆಸ್ 60 ವರ್ಷದ ಆಡಳಿತ ನಡೆಸಿದ ವೇಳೆ ದೇಶದ ಭದ್ರತೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿತ್ತು. ಆದರೆ ವಿರೋಧ ಪಕ್ಷದವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಇಂದು ಮೋದಿ ಸರಕಾರ ರೈಲ್ವೇ, ಏರ್ ‌ಪೋರ್ಟ್, ಆಯಿಲ್ ಕಂಪೆನಿ ಗಳನ್ನು ಮಾರಾಟ ಮಾಡುತ್ತಿದೆ.

ಇದೆಲ್ಲವೂ ಯಾರಪ್ಪ ಮಾಡಿದ ಸೊತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ‌‌ರಾಜ್ಯದಲ್ಲಿ ಅತೀ‌ಹೆಚ್ಚು ಸ್ಥಾನಗಳನ್ನು ಗೆದ್ದಿದಿ. ಸೋಲು ಒಪ್ಪಿಕೊಳ್ಳುತ್ತೇವೆ. ಇಂದಿರಾ ಗಾಂಧಿ ರಾಜೀವ ಗಾಂದಿಯಂತಹಾ ನಾಯಕರೇ ಸೋತಿದ್ದಾರೆ. ಸರಕಾರವನ್ನು ಬದಲಾಯಿಸುವ ಅಧಿಕಾರ ಜನರ ಕೈಯ್ಯಲ್ಲಿದೆ ಎಂಬುದು ಸತ್ಯ. ಕಾಂಗ್ರೆಸ್ ಸೋತರೆ ಪಕ್ಷಕ್ಕೇನೂ ಆಗದು ಆದರೆ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದರು.ಚುನಾವಣಾ ವಿಷಯವಾಗಿ ಬಿಂಬಿಸಿದ್ದ ಬಿಜೆಪಿ ಇಂದು ಅಧಿಕಾರದಲ್ಲಿರುವಾಗ ಕಸ್ತೂರಿ ರಂಗನ್ ವರದಿಯನ್ನು ಏಕೆ‌ ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.


ಮಾಜಿ‌ ಸಚಿವ ಗಂಗಾಧರ ಗೌಡ ಮಾತನಾಡಿ, ಸೋಲಿನ ಆತ್ಮ ವಿಮರ್ಷೆ ಮಾಡೋಣ.‌ಜೊತೆಗೆ ಚುನಾವಣೆಯ ಅಕ್ರಮವನ್ನೂ ಬಯಲಿಗೆಳೆಯೋಣ ಎಂದರು. ಕಾರ್ಮಿಕ ಮುಖಂಡ ಬಿ.ಎಮ್ ಭಟ್ ಮಾತನಾಡಿ, ಮತಪತ್ರ ಹಗರಣ ನಡೆದಿದ್ದು ಇದರ ಬಗ್ಗೆ ತನಿಖೆ ಆಗಲೇಬೇಕು. ಜಾತ್ಯಾತೀತ ರೈತರು, ಕಾರ್ಮಿಕರ ಶಕ್ತಿಯಿಂದ ನಿಮ್ಮ ನಾಶವಾಗುತ್ತದೆ ಎಂದರು.


ಪ್ರತಿಭಟನೆಯಲ್ಲಿ 

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ,‌ಪ್ರಮುಖರಾದ ಉಷಾ ಶರತ್, ಜಗದೀಶ್ ಡಿ, ಆಯೂಬ್‌ ಡಿ.ಕೆ, ಬಿ. ಅಶ್ರಫ್ ನೆರಿಯ, ಹಾಜಿರಾ, ಚಿದಾನಂದ, ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹುಮಾನ್ ಪಡ್ಪು, ರೂಪಲತಾ, ಮತ್ತಿತರರು ಪ್ರಮುಖರು, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾನಿರತರು ಬೆಳ್ತಂಗಡಿ ಅಯ್ಯಪ್ಪ ಮಂದಿರದಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದವರೆಗೆ ಮೆರವಣಿಗೆ ನಡೆಸಿದರು.


ಬಿ.ಕೆ ವಸಂತ ಕಾರ್ಯಕ್ರಮ ನಿರೂಪಿಸಿ, ತಾ.ಪಂ ಸದಸ್ಯ ಪ್ರವೀಣ್ ಗೌಡ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment