Posts

ಮೂಡುಬಿದಿರೆ: ಬೈಕ್ ಅಪಘಾತದಿಂದ ಗಾಯಗೊಂಡಿದ್ದ ಸವಾರ ಮೃತ್ಯು

0 min read


ಮೂಡುಬಿದಿರೆ: ಮೂಡುಮಾರ್ನಾಡು ಗ್ರಾಮದ ಬೆಳುವಾಯಿ- ಅಳಿಯೂರು ರಸ್ತೆಯಲ್ಲಿರುವ ಶ್ರೀ ಮಹಮ್ಮಾಯಿ ಮಂದಿರದ ಬಳಿ ಡಿ.15ರಂದು ರಾತ್ರಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ  ಗಂಭೀರವಾಗಿ ಗೊಂಡಿದ್ದ ಬೈಕ್ ಸವಾರ ಸಂತೋಷ್ ಜೈನ್ (25ವ.) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೃಷಿ, ತೋಟ ನಿರ್ವಹಣೆ ಜೊತೆಗೆ ಇಲೆಕ್ಟ್ರಿಕಲ್, ಅಡುಗೆ ಕೆಲಸಗಳಲ್ಲಿ ಸಂತೋಷ್ ಪರಿಣತರಾಗಿದ್ದರು.

ಉರಿಯಾಲದ ಆದಿರಾಜ ಜೈನ್ ಅವರ ಪುತ್ರರಾಗಿರುವ ಸಂತೋಷ್ ಅವರಿಗೆ ಮೂವರು ಸಹೋದರಿಯರಿದ್ದು, ಮೂವರಿಗೂ ಮದುವೆಯಾಗಿದೆ.

ಕೊನೆಯವರಾದ ಸಂತೋಷ್ ಅವಿವಾಹಿತರಾಗಿದ್ದರು. ತಂದೆ, ತಾಯಿ ತೀವ್ರ ಅಸೌಖ್ಯದಿಂದ ಬಳಲುತ್ತಿದ್ದು, ಅವರ ಎಲ್ಲ ಆರೈಕೆ, ಪಾಲನೆಯನ್ನು ಸಂತೋಷ್ ಮಾಡುತ್ತಿದ್ದರು‌.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment