Posts

ಬಾಲಕ ಅಪಹರಣ- 17 ಕೋಟಿಯಿಂದ 25 ಲಕ್ಷಕ್ಕೆ ಇಳಿದ ಹಣದ ಬೇಡಿಕೆ ಬಾಲಕನ ಅಪಹರಣವಾದ ಕುಟುಂಬವನ್ನು ಭೇಟಿ ಮಾಡಿದ ಎಸ್.ಪಿ ಲಕ್ಷ್ಮೀ ಪ್ರಸಾದ್

1 min read

ಬೆಳ್ತಂಗಡಿ: ಉಜಿರೆಯ ಉದ್ಯಮಿ ಎ.ಜೆ ಬಿಜೋಯ್ ಎಂಬವರ‌ ಪುತ್ರ ಬಾಲಕ ಅನುಭವ್ ಅವರ ಅಪಹರಣವಾಗಿ 24 ಗಂಟೆಗಳಾಗುತ್ತಿದ್ದು ಬಾಲಕನ ಕುಟುಂಬವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಲಕ್ಷ್ಮೀ ಪ್ರಸಾದ್ ಐಪಿಎಸ್ ಅವರು ಭೇಟಿ ಮಾಡಿ ಧೈರ್ಯ ತುಂಬಿದರು.

ರಾಜ್ಯದಲ್ಲೇ ಸಂಚಲನ ಮೂಡಿಸಿದ ಈ ಪ್ರಕರಣದಲ್ಲಿ ವಿವಿಧ ತಂಡವಾಗಿ ಪೊಲೀಸರು ಪತ್ತೆ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಇದರಲ್ಲಿ ಒತ್ತೆಯಾಳುಗಳು ಇಟ್ಟಿದ್ದ 17 ಕೋಟಿ ರೂ. ಬೇಡಿಕೆ ಶುಕ್ರವಾರ ಸಂಜೆ ವೇಳೆಗೆ 25 ಲಕ್ಷಕ್ಕೆ ಇಳಿದಿದೆ ಎಂದು ಖಚಿತಗೊಂಡಿದೆ.

ಉಜಿರೆ ಜನಾರ್ದನ  ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆಯ ಬಳಿಯಿರುವ ಅವರ ಮನೆಯಿಂದ ಇಂಡಿಕಾ ಕಾರಿನಲ್ಲಿ ಬಾಲಕನನ್ನು ಗುರುವಾರ ಸಂಜೆಯ ವೇಳೆ ಅಪಹರಿಸಲಾಗಿತ್ತು. 

ಬಾಲಕನ ಅಜ್ಜ, ಮಾಜಿ ಸೈನಿಕ ಎ. ಕೆ ಶಿವನ್ ಅವರ ಕಣ್ಣೇದುರೇ ಈ ಘಟನೆ ನಡೆದಿತ್ತು.

ಬಾಲಕನನ್ನು ಅಪಹರಣ ಮಾಡಿದ ಆಗಂತುಕರ ತಂಡ ರಾತ್ರಿಯೇ ಆತನ ತಾಯಿಗೆ ಸಂದೇಶ ಕಳಿಸಿ ಪ್ರಾರಂಭದಲ್ಲಿ 17 ಕೋಟಿ ರೂ ಬೇಡಿಕೆ ಇಟ್ಟವರು ಮಧ್ಯ ರಾತ್ರಿ ವೇಳೆ ಈ ಮೊತ್ತವನ್ನು 10 ಕೋಟಿ ರೂ.ಗಳಿಗೆ ಇಳಿಸಿದ್ದರು.‌ ಸಂಜೆ ವೇಳೆಗೆ 25 ಲಕ್ಷ ರೂ.ಗೆ ಇಳಿದಿದ್ದಾರೆನ್ನಲಾಗಿದೆ. 


ಅಪಹರಣದ ಹಿಂದೆ ಬಿಟ್ ಕಾಯಿನ್ ವ್ಯವಹಾರದ ಕರಿ‌ನೆರಳು;

ಬಾಲಕನನ್ನು ಒತ್ತೆ ಇರಿಸಿಕೊಂಡಿರುವ  ಅಪಹರಣಕಾರರು ಅವರ ಮನೆಯವರಿಗೆ ಕರೆ ಮಾಡಿ ಬಿಟ್ ಕಾಯಿನ್ ಮೂಲಕ ಆರ್ಥಿಕ ಬೇಡಿಕೆ ಮುಂದಿಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಹಿಂದೆ ಇದ್ದ ಐ ಕಾಯಿನ್ ದಂಧೆಯ ಬಳಿಕ  ಬಿಟ್ ಕಾಯಿನ್ ದಂಧೆ ಕೂಡ ವ್ಯಾಪಕವಾಗಿ ಹಬ್ಬಿರುವುದಕ್ಕೆ ಇದು ಪುರಾವೆ ನೀಡಿದಂತಾಗಿದೆ.


ಬಿಟ್ ಕಾಯಿನ್ ಎಂದರೇನು?

ವ್ಯವಹಾರದ ಪ್ರಕಾರ ಒಂದು ಲಕ್ಷ ರೂಪಾಯಿ ಡೆಪಾಸಿಟ್ ಇಟ್ಟಲ್ಲಿ, ವಾರ ವಾರ ಹಣ ವಾಪಾಸಾಗಿಸುವುದು. ಹಣ ತೊಡಗಿಸಿಕೊಂಡವರಿಗೆ ಹಣದ ಮೂರುಪಟ್ಟು ವಾಪಾಸು ನೀಡುವ ವ್ಯವಹಾರವೇ ಬಿಟ್ ಕಾಯಿನ್. ಬಹು ಲಾಭದ ಆಸೆ ಹುಟ್ಟಿಸಿ ಸಾವಿರಾರು ಜನರು ಇದರಲ್ಲಿ ಹಣ ತೊಡಗಿಸಿ ಇಂದು ಕಣ್ಣೀರಿನಲ್ಲಿ‌ ಕೈ ತೊಳೆಯುತ್ತಿದ್ದಾರೆ.

ಅನೇಕ ಮಂದಿ ಯುವಕರು, ಯುವ ಉದ್ಯಮಿಗಳು ಈ  ದಂಧೆಯಲ್ಲಿ ಭಾಗಿಯಾಗಿ ನಷ್ಟ ಅನುಭವಿಸಿದ ಉದಾಹರಣೆ ಇದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment