ಧರ್ಮಸ್ಥಳ ಶ್ರೀ ರಾಮಕ್ಷೇತ್ರದಲ್ಲಿ 6 ಕೋಟಿ ರೂ.ವೆಚ್ಚದ ಅನ್ನ ಚತ್ರದ ಶಿಲಾನ್ಯಾಸ ಜುಲೈ 24 ರಂದು ಶ್ರೀ ರಾಮ ಕ್ಷೆತ್ರದಲ್ಲಿ ನಡೆಯಿತು.
ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿದರು.
ಕರ್ನಾಟಕ ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಭಟ್ಕಳ ಮಾಜಿ ಶಾಸಕ ಮಾಂಕಲ್ ವೈದ್ಯ, ಕ್ಯೂನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ಶ್ರೀ ರಾಮ ಕ್ಷೇತ್ರ ಚಾತುರ್ಮಾಸ್ಯ ಸಮಿತಿಯ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ನಿಡ್ಗಲ್, ಶೈಲೇಶ್ ಕುಮಾರ್, ರಾಜಶೇಖರ್ ಕೋಟ್ಯಾನ್, ಜಗದೀಶ್ ಅಧಿಕಾರಿ, ಸುಂದರ ಹೆಗ್ಡೆ, ಎಂ ತುಂಗಪ್ಪ ಬಂಗೇರ, ರವಿ ಕುಮಾರ್ ಬರಮೇಲು, ಕೊರಗಪ್ಪ ಗೌಡ, ಜಗದೀಶ್ ಅಧಿಕಾರಿ ಮೂಡಬಿದ್ರೆ, ರತ್ನಾಕರ್ ಬುಣ್ಣಾನ್, ಹರೀಶ್ ಮೋರ್ತಾಜೆ, ದಯಾನಂದ ಬೆಳಾಲು, ಸುಧೀರ್ ಆರ್ ಸುವರ್ಣ, ರವೀಂದ್ರ ಆರ್ಲ, ತುಕಾರಾಮ್ ಸಾಲಿಯಾನ್, ರಾಜು ಪೂಜಾರಿ ಕಾಶಿಪಟ್ಞ, ಸುಜಾತಾ ಅಣ್ಣಿ ಪೂಜಾರಿ, ಧರ್ಮಣ ಗೌಡ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ,ಪ್ರಶಾಂತ್ ಪ್ರತಿಮನಿಲಯ,ಕೃಷ್ಣಪ್ಪ ಗುಡಿಗಾರ, ಜಯಶಂಕರ್ ಎಂ.ಬಿ, ಚಿತ್ತರಂಜನ್, ಸುಂದರ ಹೆಗ್ಡೆ ಮೊದಲಾದ ಪ್ರಮುಖರು, ಭಕ್ತಾಧಿಗಳು. ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೇಶವ ಬಂಗೇರ ಕಳಿಯ ಕಾರ್ಯಕ್ರಮ ನಿರೂಪಿಸಿದರು.