Posts

ನವೆಂಬರ್ 20- 21 ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರತಿಭೋತ್ಸವ ಕಾಜೂರಿನಲ್ಲಿ|| ದಿನಾಂಕ‌ ಘೋಷಣೆ; ಸ್ವಾಗತ ಸಮಿತಿ ರಚನೆ

1 min read


ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಟ್ ಫೆಡರೇಶನ್ (ರಿ.) ದ.ಕ ಜಿಲ್ಲೆ ಈಸ್ಟ್ ಇದರ ಪ್ರತಿಭೋತ್ಸವ ಘೋಷಣೆ ಹಾಗೂ ಸ್ಥಳೀಯ ಸ್ವಾಗತ ಸಮಿತಿ ರಚನೆಯು ಇತ್ತೀಚೆಗೆ ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಸಮುದಾಯ ಭವನದಲ್ಲಿ ‌ಜಿಲ್ಲಾಧ್ಯಕ್ಷ ಇಬ್ರಾಹಿಂ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ದುಃಅ ನೇತೃತ್ವ ನೀಡಿ ಪ್ರತಿಭೋತ್ಸವ ದಿನಾಂಕವನ್ನು ಘೋಷಣೆ ಮಾಡಿದರು.

ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷ ಕೆ.ಯು ಇಬ್ರಾಹಿಂ ಪ್ರತಿಭೋತ್ಸವ ತೀಮ್ ಸಾಂಗ್ ಬಿಡುಗಡೆ ಮಾಡಿದರು.

ಎಸ್ಸೆಸ್ಸೆಫ್ ದ‌.ಕ ಜಿಲ್ಲಾ ಈಸ್ಟ್ ಪ್ರತಿಭೋತ್ಸವವು ನವೆಂಬರ್ 20 ಶನಿವಾರ 21 ಆದಿತ್ಯವಾರ ದಂದು ದರ್ಗಾ ವಠಾರ ಕಾಜೂರಿನಲ್ಲಿ ನಡೆಯಲಿದೆ.

ಕಾಜೂರು ತಂಙಳ್, ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಇವರನ್ನು ಸ್ವಾಗತ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಸ್ಥಳೀಯ ಸ್ವಾಗತ ಸಮಿತಿಯ ಚೇರ್ಮನ್ ಆಗಿ ಎಸ್‌ವೈಎಸ್ ಕಾಜೂರು ಇದರ ಅಧ್ಯಕ್ಷರೂ ಆಗಿರುವ ಕೆ.ಎಮ್ ಅಬೂಬಕ್ಕರ್ ಕುಕ್ಕಾವು, 

ಕೆ.ಎಮ್ ಅಬೂಬಕ್ಕರ್ ಕುಕ್ಕಾವು
ಕನ್ವೀನರ್ ಆಗಿ ಅಝೀಝ್ ದಿಡುಪೆ, ಫೈನಾನ್ಸ್ ಕಾರ್ಯದರ್ಶಿಯಾಗಿ ಡಿ.ವೈ ಉಮರಬ್ಬ,  ವೈಸ್ ಚೆಯರ್‌ಮೆನ್ ಗಳಾಗಿ ಕೆ.ಪಿ ಮುಹಮ್ಮದ್, ಪಿ.ಎ ಮುಹಮ್ಮದ್, ಜೆ.ಎಚ್.ಉಸ್ಮಾನ್ ಮತ್ತು ರಶೀದ್ ಮದನಿ,

ವೈಸ್ ಕನ್ವೀನರ್ ಗಳಾಗಿ ಸಿರಾಜ್, ಶಾಕೀರ್, ಮಜೀದ್ ಕುಕ್ಕಾವು, ಪಿ.ಎ ಉಸ್ಮಾನ್ ಮತ್ತು ಶರೀಫ್ ಸಖಾಫಿ ದಿಡುಪೆ ಇವರನ್ನು ಆರಿಸಲಾಯಿತು.


ಸಮಿತಿ ಸದಸ್ಯರಾಗಿ ಹಕೀಂ ಮುಸ್ಲಿಯಾರ್, ನಝೀರ್, ನಾಸಿರ್, ಹಸೈನಾರ್, ರಾಝಿಕ್, ಹೈದರಾಲಿ, ಅಬೂಸ್ವಾಲಿಹ್,ನೌಶಾದ್, ಶೌಕತ್ ಆಲಿ, ಇಬ್ರಾಹಿಂ ಕಾಜೂರು, ಫಾರೂಕ್, ಮುಸ್ತಫಾ ಬಿ ವೈ, ರಿಯಾಝ್, ಜಬ್ಬಾರ್, ಮುಂತಾದವರನ್ನು ಒಳಗೊಂಡ ಸ್ಥಳೀಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ದ.ಕ ಜಿಲ್ಲಾ  ಪ್ರಧಾನ ಕಾರ್ಯದರ್ಶಿ, ರಾಜ್ಯ ಸದಸ್ಯ ಮುಹಮ್ಮದ್ ಅಲಿ ತುರ್ಕಳಿಕೆ ಪ್ರಸ್ತಾವಣೆಗೈದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ‌.ಕ ಜಿಲ್ಲಾ ಪ್ರತಿಭೋತ್ಸವ ಚೆರ್ಮೆನ್ ಫೈಝಲ್ ಝುಹ್ರಿ ಕಲ್ಲಗುಂಡಿ,‌ ಕನ್ವೀನರ್ ಹಕೀಂ ಕಳಂಜಿಬೈಲು, ಜಿಲ್ಲಾ ಕೋಶಾಧಿಕಾರಿ, ರಾಜ್ಯ ಸದಸ್ಯ ಎಂ.ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿ ಗಳಾದ ಇಕ್ಬಾಲ್ ಮಾಚಾರು, ಮುಸ್ತಫಾ ಉರುವಾಲುಪದವು ಮತ್ತು ಸಿದ್ದೀಕ್ ಗೂನಡ್ಕ,ಸದಸ್ಯರಾದ ಶರೀಫ್ ನಾವೂರು‌ ಹಾಗೂ ಸ್ಥಳಿಯ ಎಸ್ಸೆಸ್ಸೆಫ್, ಎಸ್‌ವೈಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಸದಸ್ಯ ರಶೀದ್ ಮದನಿ ಇಂದಬೆಟ್ಟು ಸ್ವಾಗತಿಸಿದರು. ಜಿಲ್ಲಾ ನಾಯಕ ಮಸ್‌ಹೂದ್ ಸ‌ಅದಿ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment