Posts

ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಾಧವ ಗೌಡ ಖಂಡಿಗ ಬಿಜೆಪಿ ಗೆ ರಾಜೀನಾಮೆ

1 min read

 

ಬೆಳ್ತಂಗಡಿ: ಶಿಬಾಜೆ ಗ್ರಾ.ಪಂ ಒಂದು ಅವಧಿಗೆ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದ ಮಾಧವ ಗೌಡ ಖಂಡಿಗ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ‌.

ಈ ಬಗ್ಗೆ ಪಕ್ಷದ ಮಂಡಲ ಅಧ್ಯಕ್ಷ  ಜಯಂತ ಕೋಟ್ಯಾನ್ ಅವರಿಗೆ ಲಿಖಿತ ಪತ್ರ ನೀಡಿದ್ದಾರೆ.

ಪಕ್ಷದ ಗ್ರಾಮ ಮಟ್ಟದ ಪಧಾಧಿಕಾರಿಗಳ ತಾರತಮ್ಯ ದೋರಣೆಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಜನರ ಬೇಡಿಕೆಯಂತೆ ನನ್ನನ್ನು ಚುನಾಯಿಸಿದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಾಗಿರುವುದಿಲ್ಲ. ಹಲವಾರು ಪ್ರಕರಣಗಳಲ್ಲಿ ನನ್ನ ವಿರುದ್ದ ಅಪಪ್ರಚಾರ ಮಾಡಲಾಗಿದೆ. ಇದೆಲ್ಲ ಕಾರಣಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ನಾನು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತನಾಗಿದ್ದು ಸಂಘದ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುತ್ತೇನೆ. ಇತರ ಹಿಂದೂ ಸಂಘಟನೆಗಳ ಸಮೀಪದ ಸಂಪರ್ಕ ಹೊಂದಿರುತ್ತೇನೆ. ನಾನು ನನ್ನ ಬಾಲ್ಯದಿಂದಲೇ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಹಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೀದ್ದೇನೆ. ಕಳೆದ 13 ವರ್ಷಗಳಿಂದ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿರುತ್ತೇನೆ. ಆದರೆ ಪಕ್ಷದಲ್ಲಿದ್ದುಕೊಂಡೇ ನನ್ನ ಆತ್ಮ ಸಾಕ್ಷಿಗೆ ಸರಿಯಾಗಿ ಜನರ ಕೆಲಸಗಳನ್ನು ಮಾಡಲು ಸಾದ್ಯವಾಗುತ್ತಿಲ್ಲ ಎಂದು ಮನನೊಂದು ನನ್ನನ್ನು ಚುನಾಯಿಸಿದ ಜನತೆ ಮತ್ತು ನನ್ನ ದ್ಯೇಯ ಧೋರಣೆಗಳೊಂದಿಗೆ ಬೆಂಬಲಿತವಾಗಿರುವ ದೇವ ದುರ್ಲಬ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಎಂದು ವಿವರಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment